ಚಂಡೀಗಢ: ಕೆಲವರಿಗೆ ಸಾಹಸ ಎಂಬುದು ರಕ್ತಗತವಾಗಿಯೇ ಬಂದಿರುತ್ತದೆ. ಸೋಮವಾರ ಪಂಜಾಬ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಬ್ ಇನ್ಸ್ಪೆಕ್ಟರ್ ಬಲ್ಜೀತ್ ಸಿಂಗ್ ಕೂಡ ಸಾಹಸ, ದೇಶಪ್ರೇಮವನ್ನು ರಕ್ತದಿಂದಲೇ ಮೈಗೂಡಿಸಿಕೊಂಡವರು.
ಬಲ್ಜೀತ್ ಸಿಂಗ್ ಅವರ ತಂದೆ ಕೂಡ ಇನ್ಸ್ಪೆಕ್ಟರ್ ಆಗಿದ್ದವರು, 1984ರಲ್ಲಿ ಇವರು ಖಲೀಸ್ತಾನ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ತಂದೆಯ ಹಾದಿಯಲ್ಲೇ ಸಾಗಿರುವ ಬಲ್ಜೀತ್ ಕೂಡ ಹುತಾತ್ಮರೆನಿಸಿಕೊಂಡಿದ್ದಾರೆ.
50 ವರ್ಷದ ಬಲ್ಜೀತ್ ಗುರುದಾಸ್ಪುರದ ಎಸ್ಪಿ ಆಗಿ ಕೆಲವು ತಿಂಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿದ್ದರು, ಸೋಮವಾರ ಕಟ್ಟಡದೊಳಗೆ ನುಗ್ಗಲು ಪ್ರಯತ್ನಿಸಿದ್ದ ಉಗ್ರರ ವಿರುದ್ಧ ತನ್ನ ತಂಡದೊಂದಿಗೆ ಕಾರ್ಯಾಚರಣೆಗಿಳಿದಿದ್ದ ಇವರು ತಲೆಗೆ ಬುಲೆಟ್ ತಾಕಿ ಸಾವನ್ನಪ್ಪಿದ್ದಾರೆ.
ಉಗ್ರರ ವಿರುದ್ಧ ಹೋರಾಡಲು ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ, ಸಿಬ್ಬಂದಿಗಳೂ ಇರಲಿಲ್ಲ. ಆದರೂ ಬೆರಳೆಣಿಕೆಯಷ್ಟು ಕಾನ್ಸ್ಸ್ಟೇಬಲ್ಗಳೊಂದಿಗೆ ಅವರು ಕಾರ್ಯಾಚರಣೆಗಿಳಿದು ಅಮರರಾಗಿದ್ದಾರೆ. ಈ ಮೂಲಕ ತನ್ನ ತಂದೆಯಂತೆ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.