ಮುಂಬಯಿ: 12 ವರ್ಷದ ಮುಸ್ಲಿಂ ಬಾಲೆಯೊಬ್ಬಳು ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ ಗೆದ್ದು ನಿಜವಾದ ಧಾರ್ಮಿಕ ಭಾವೈಕ್ಯತೆ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಮುಂಬಯಿ ಶಾಲೆಯೊಂದರ 6ನೇ ತರಗತಿಯ ವಿದ್ಯಾರ್ಥಿನಿ ಮರಿಯಂ ಸಿದ್ದೀಕಿ ಇಸ್ಕಾಮ್ ಅವರು ಏರ್ಪಡಿಸಿದ್ದ ‘ಗೀತಾ ಚಾಂಪಿಯನ್ ಲೀಗ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲ, 3 ಸಾವಿರ ಸ್ಪರ್ಧಾಳುಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನವನ್ನೂ ಪಡೆದುಕೊಂಡಿದ್ದಾಳೆ.
‘ನಾನು ಧರ್ಮದ ಬಗೆಗೆ ಸದಾ ಅನ್ವೇಷಣೆ ಮಾಡುತ್ತಿರುತ್ತೇನೆ. ಸಮಯವಿದ್ದಾಗ ಧಾರ್ಮಿಕ ಪುಸ್ತಕಗಳನ್ನು ಓದುತ್ತೇನೆ. ಗೀತಾ ಸ್ಪರ್ಧೆಯ ಬಗೆಗೆ ನನ್ನ ಟೀಚರ್ ಹೇಳಿದಾಗ ತುಂಬ ಉತ್ಸಾಹದಿಂದ ಅದರಲ್ಲಿ ಪಾಲ್ಗೊಂಡೆ. ಗೀತೆಯ ಬಗ್ಗೆ ಉತ್ತಮ ಜ್ಞಾನ ಪಡೆಯಲು ನನಗಿದು ಉತ್ತಮ ಅವಕಾಶವಾಗಿತ್ತು. ಇದಕ್ಕೆ ನನ್ನ ಪೋಷಕರೂ ಸಾಕಷ್ಟು ಪ್ರೋತ್ಸಾಹ ನೀಡಿದರು’ ಎಂದು ಮರಿಯಮ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.
ನನ್ನ ಕುಟುಂಬ ಎಲ್ಲಾ ಧರ್ಮವನ್ನು ಗೌರವಿಸುತ್ತದೆ. ಯಾವ ಧರ್ಮವೂ ದ್ವೇಷವನ್ನು ಬಿತ್ತುವುದಿಲ್ಲ. ಆದರೆ ಕೆಲವರು ನಮಗೆ ತಪ್ಪು ಬೋಧನೆ ಮಾಡುತ್ತಿದ್ದಾರೆ. ಆದರೆ ನಾವು ಹಾಗಾಗಲು ಬಿಡಬಾರದು. ನಮ್ಮ ಮಕ್ಕಳಿಗೆ ಸರಿ ಏನೆಂಬುದನ್ನು ತಿಳಿಸಿಕೊಡಬೇಕು ಎಂದು ಆಕೆ ಹೇಳಿದ್ದಾರೆ.
ಧರ್ಮಗಳ ನಡುವೆ ದ್ವೇಷ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಮರಿಯಮ್ಳ ಧಾರ್ಮಿಕ ಸಹಿಷ್ಣುತೆ ನಿಜಕ್ಕೂ ಪ್ರೇರಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.