ನವದೆಹಲಿ: ಶ್ರೀರಾಮ ಮಂದಿರದ ಭೂಮಿ ಪೂಜೆಗಾಗಿ ಪವಿತ್ರ ಕ್ಷೇತ್ರ ಅಯೋಧ್ಯೆ ಸಿದ್ಧವಾಗಿದೆ. ಭೂಮಿ ಪೂಜೆ ಸಮಾರಂಭಕ್ಕಾಗಿ ದೇಶದಾದ್ಯಂತದ ಪವಿತ್ರ ಕ್ಷೇತ್ರಗಳಿಂದ ಜಲ ಮತ್ತು ಮಣ್ಣು ಅಯೋಧ್ಯೆಗೆ ಆಗಮಿಸುತ್ತಿದೆ. ಅದರಲ್ಲೂ ಹತ್ತು ವರ್ಷದ ಪುಟಾಣಿ ಬಾಲಕನೊಬ್ಬ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಮನೆಗಳಿಗೆ ಭೇಟಿ ನೀಡಿ ಅಲ್ಲಿಂದ ಸಂಗ್ರಹಿಸಿದ ಮಣ್ಣನ್ನು ಅಯೋಧ್ಯೆಗೆ ಸಮರ್ಪಿಸುವ ಕಾಯಕವನ್ನು ಮಾಡಿದ್ದಾನೆ.
ವರದಿಗಳ ಪ್ರಕಾರ, ಹತ್ತು ವರ್ಷದ ಪುಟಾಣಿ ದೇವ್ ಪರಾಶರ್ ಕನಿಷ್ಠ 11000 ಹುತಾತ್ಮರ ಮನೆಗಳಿಗೆ ತೆರಳುವ ಮತ್ತು ಹುತಾತ್ಮರ ಕುಟುಂಬಗಳನ್ನು ಭೇಟಿಯಾಗುವ, ಅವರ ಮನೆಗಳಿಂದ ಮಣ್ಣನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾನೆ. ಹುತಾತ್ಮರ ಮನೆಗಳಿಗೆ ಭೇಟಿ ನೀಡಿದ ಬಳಿಕ ದೇವ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾನೆ.
ಈಗಾಗಲೇ ಈತ 1600 ಹುತಾತ್ಮರ ಮನೆಗಳಿಗೆ ಭೇಟಿ ನೀಡಿದ್ದಾನೆ. ಅವರ ಮನೆಗಳಿಗೆ ಭೇಟಿ ನೀಡಿ ಅಲ್ಲಿ ತ್ರಿವರ್ಣ ಧ್ವಜವನ್ನು ಈತ ಅಲ್ಲಿ ಅಳವಡಿಸುತ್ತಾನೆ. ಮಾತ್ರವಲ್ಲ, ಈತ ಭಾರತಾಂಬೆಯ ನೈಜ ಪುತ್ರರಾದ ಹುತಾತ್ಮ ಯೋಧರ ಸ್ಮರಣಾರ್ಥ ನಿರ್ಮಾಣ ಮಾಡಲಾಗಿರುವ ಸ್ಮಾರಕಗಳಿಗೆ ತೆರಳಿ ಅವುಗಳನ್ನು ಸ್ವಚ್ಛ ಮಾಡುವ ಕಾರ್ಯ ಮಾಡುತ್ತಾನೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.
ಈಗಾಗಲೇ ಈತ ತಾನು ಹುತಾತ್ಮರ ಮನೆಗಳಿಂದ ಸಂಗ್ರಹಿಸಿರುವ ಮಣ್ಣನ್ನು ಅಯೋಧ್ಯೆಗೆ ತೆರಳಿ ನೀಡಿದ್ದಾನೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಇದನ್ನು ಹಸ್ತಾಂತರ ಮಾಡಿದ್ದಾನೆ.
ಈತ ನೀಡಿರುವ ಮಣ್ಣನ್ನು ಭೂಮಿಪೂಜೆ ವೇಳೆ ಹುತಾತ್ಮರ ಗೌರವಾರ್ಥವಾಗಿ ಬಳಸಿಕೊಳ್ಳಲಾಗುವುದು ಎಂದು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.