ವಾಷಿಂಗ್ಟನ್: ಭಾರತದ ಜೊತೆಗೆ ಪೂರ್ವ ಲಡಾಖ್ನ ಗಾಲ್ವಾನ್ ಗಡಿಯಲ್ಲಿ ಕಾಲ್ಕೆರೆದುಕೊಂಡು ಸಂಘರ್ಷಕ್ಕೆ ಇಳಿದ ಚೀನಾಗೆ ಭಾರತ ಒಡ್ಡಿರುವ ಪ್ರತಿರೋಧಕ್ಕೆ ಅಮೆರಿಕಾದ ಸಂಸದರು ಪಕ್ಷಬೇಧ ಮರೆತು ಬೆಂಬಲ ಸೂಚಿಸಿದ್ದಾರೆ.
ಈ ಕುರಿತಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ಮತ್ತು ಸೆನೆಟ್ನಲ್ಲಿ ಮಾತನಾಡಿರುವ ಅಮೆರಿಕದ ಸಂಸದರು, ಭಾರತದ ಗಡಿಯಲ್ಲಿ ಕ್ಯಾತೆ ತೆಗೆದು ಅತಿಕ್ರಮಣ ಮಾಡಿರುವ ಚೀನಾಕ್ಕೆ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ. ಈ ಗಲಾಟೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾದ ಬಗ್ಗೆ ಭಾರತ ಸರ್ಕಾರ ಮಾಹಿತಿ ನೀಡಿದೆ. ಆದರೆ ಚೀನಾ ಇಂತಹ ಯಾವುದೇ ಮಾಹಿತಿಯನ್ನು ಈವರೆಗೂ ಬಹಿರಂಗಪಡಿಸಿಲ್ಲ ಎಂದೂ ತಿಳಿಸಿದ್ದಾರೆ.
ಚೀನಾ ತಕ್ಷಣವೇ ಇಂತಹ ಆಕ್ರಮಣಕಾರಿ ನೀತಿಯನ್ನು ನಿಲ್ಲಿಸಬೇಕು. ಗಡಿ ಪ್ರದೇಶಗಳ ಬಗ್ಗೆ ಅದೇನೇ ತಕರಾರುಗಳಿದ್ದರೂ, ಅದನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅಮೆರಿಕಾ ಸಂಸದರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಅಮೆರಿಕನ್ ಸಂಸದರು ಭಾರತಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ. ಇನ್ನೂ ಕೆಲವು ಸಂಸದರು, ಚೀನಾ ತಂಟೆಯ ವಿರುದ್ಧ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಂಡ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯ ವೈಖರಿಗೆ ಪತ್ರ ಮುಖೇನ ಶಹಬ್ಬಾಸ್ ಎಂದಿದ್ದಾರೆ.
ಈ ಸಂಬಂಧ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರೊಂದಿಗೂ ಈ ಕುರಿತಂತೆ ಅಮೆರಿಕದ ಅನೇಕ ಸಂಸದರು ಮಾತುಕತೆ ನಡೆಸಿದ್ದಾರೆ. ಜೊತೆಗೆ ಭಾರತಕ್ಕೆ ತಮ್ಮ ಬೆಂಬಲವಿರುವುದಾಗಿಯೂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.