ವಾಷಿಂಗ್ಟನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಶಿಲಾನ್ಯಾಸ ನಡೆಯುವ ಐತಿಹಾಸಿಕ ಸಮಾರಂಭವನ್ನು ಆಚರಿಸುವ ಸಲುವಾಗಿ ಉತ್ತರ ಅಮೆರಿಕದ ಹಿಂದೂ ದೇವಾಲಯಗಳು ವರ್ಚುವಲ್ ರಾಷ್ಟ್ರೀಯ ಪ್ರಾರ್ಥನೆ ನಡೆಸಲಿವೆ ಎಂದು ಧಾರ್ಮಿಕ ಗುಂಪುಗಳು ಪ್ರಕಟಿಸಿವೆ.
ಅಯೋಧ್ಯೆಯಲ್ಲಿ ನಡೆಯಲಿರುವ “ಶ್ರೀ ರಾಮ ಮಂದಿರ ಪೂಜೆ” ಅನ್ನು ಸಂಭ್ರಮಿಸಲು ಅಮೆರಿಕದಾದ್ಯಂತ ವರ್ಚುವಲ್ ಸಾಮೂಹಿಕ ರಾಷ್ಟ್ರೀಯ ಪ್ರಾರ್ಥನೆಯನ್ನು ಹಿಂದೂ ಮಂದಿರ ಕಾರ್ಯನಿರ್ವಾಹಕರ ಕಾನ್ಫರೆನ್ಸ್ (ಎಚ್ಎಂಇಸಿ) ಮತ್ತು ಹಿಂದೂ ಮಂದಿರ ಅರ್ಚಕರ ಕಾನ್ಫರೆನ್ಸ್ (ಎಚ್ಎಂಪಿಸಿ) ನಡೆಸಲಿದೆ ಎಂದು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶುಭ ಸಂದರ್ಭದಲ್ಲಿ, ಯುಎಸ್, ಕೆನಡಾ ಮತ್ತು ಕೆರಿಬಿಯನ್ ದ್ವೀಪಗಳಾದ್ಯಂತದ ದೇವಾಲಯಗಳು ರಾಮ ಮಂದಿರ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ಮುನ್ನಾದಿನದಂದು ಭಗವಾನ್ ರಾಮನ ಹೆಸರಿನಲ್ಲಿ ʼಲೋಟಸ್ ಫೀಟ್ʼ ಸೇವೆ ನೀಡಲು ಸೇರಿಕೊಳ್ಳಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಜಾಗತಿಕ ಹಿಂದೂ ಸಮುದಾಯಕ್ಕೆ ಆಗಸ್ಟ್ 5, 2020 ರಂದು ನಡೆಯುವ ಐತಿಹಾಸಿಕ ಸಮಾರಂಭವು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಈ ದಿನವನ್ನು ನಾವು ಈಗ ಹಬ್ಬವಾಗಿ ಆಚರಿಸಬೇಕು ಮತ್ತು ಭವಿಷ್ಯದಲ್ಲಿ ಎಂದೆಂದಿಗೂ ಆಚರಿಸಬೇಕು” ಎಂದು ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿರುವ ಶಿವ ದುರ್ಗಾ ದೇವಾಲಯದ ಸ್ಥಾಪಕ, ಅಧ್ಯಕ್ಷ ಮತ್ತು ಆಚಾರ್ಯ ಪಂಡಿತ್ ಕೃಷ್ಣ ಕುಮಾರ್ ಪಾಂಡೆ ಹೇಳಿದರು.
ಅಮೆರಿಕದ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿನ ಆಗಸ್ಟ್ 5 ರ ಸಮಾರಂಭವನ್ನು ಗುರುತಿಸಲು ಪ್ರಾರ್ಥನೆಗಳನ್ನು ಆಯೋಜಿಸುತ್ತಿದೆ.
ಉತ್ತರ ಅಮೆರಿಕಾದಲ್ಲಿ ಪುರೋಹಿತರು ಸಾಮೂಹಿಕ ಪಠಣ ನಡೆಸಲಿದ್ದಾರೆ, ನಂತರ ಹಿನ್ನೆಲೆ ಗಾಯಕರಾದ ಅನುಪ್ ಜಲೋಟಾ ಮತ್ತು ಸಂಜೀವನಿ ಭೆಲಾಂಡೆ ಅವರಿಂದ ಭಕ್ತಿಗೀತೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.