ನವದೆಹಲಿ: ಅಮೆರಿಕಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಜಾಗತಿಕ ಸಂವಹನ ಮತ್ತು ಪಿಆರ್ ಸಂಸ್ಥೆಯು ನಡೆಸಿದ 2020 ರ ಎಡೆಲ್ಮನ್ ಟ್ರಸ್ಟ್ ಬಾರೋಮೀಟರ್ ಸಮೀಕ್ಷೆಯು, ಭಾರತದ 87% ಜನರು ಪ್ರಸ್ತುತ ಸರ್ಕಾರವನ್ನು ನಂಬಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಬೇರೆ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲೂ ಇಷ್ಟೊಂದು ಪ್ರಮಾಣದ ಜನರು ತಮ್ಮ ಸರ್ಕಾರಗಳ ಮೇಲೆ ನಂಬಿಕೆಯನ್ನು ಇರಿಸಿಲ್ಲ.
ವರದಿಗಳು ಹೇಳುವಂತೆ ಸಮೀಕ್ಷೆಯ ಪ್ರಕಾರ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ, ಜಪಾನ್ , ಕೆನಡಾ ಯುಎಸ್ ಅನ್ನು ಹಿಂದಿಕ್ಕಿದೆ. ಮೊದಲ ಸ್ಥಾನವನ್ನು ಕಮ್ಯುನಿಷ್ಟ್ ರಾಷ್ಟ್ರ ಚೀನಾ ಪಡೆದುಕೊಂಡಿದೆ.
2020 ಎಡೆಲ್ಮನ್ ಬಾರೋಮೀಟರ್ ಟ್ರಸ್ಟ್ ಮತ್ತು ಕ್ರೆಡಿಬಿಲಿಟಿ ಸಮೀಕ್ಷೆಯ ಪ್ರಕಾರ, 2020 ರ ಜನವರಿಯಿಂದ ಭಾರತ ಸರ್ಕಾರದ ಮೇಲಿನ ಜನರ ವಿಶ್ವಾಸಾರ್ಹತೆಯ ಮಟ್ಟವು 7% ರಷ್ಟು ಹೆಚ್ಚಾಗಿದೆ.
ಸಾಂಕ್ರಾಮಿಕದ ನಿರ್ಣಾಯಕ ಸಮಯದಲ್ಲಿ, ಜಾಗತಿಕ ರಾಜಕೀಯ ಹೆಚ್ಚು ಸುದ್ದಿ ಮಾಡುತ್ತಿದೆ. ವಿಶ್ವ ನಾಯಕರ ಮೇಲಿನ ವಿಶ್ವಾಸ ಕೂಡ ಭಾರೀ ದೊಡ್ಡ ಪ್ರಮಾಣದಲ್ಲಿ ಕುಸಿತವನ್ನು ಕಾಣುತ್ತಿದೆ.
ಪ್ರತಿ ದೇಶದಲ್ಲೂ 1,200 ಕ್ಕೂ ಹೆಚ್ಚು ಪ್ರತಿಸ್ಪಂದಕರನ್ನು ಒಳಪಡಿಸಿ ನಡೆಸಲಾದ ಸಮೀಕ್ಷೆಯ ಮಾದರಿಯನ್ನು ಆಧರಿಸಿ ಸಮೀಕ್ಷೆಯ ಫಲಿತಾಂಶವನ್ನು ಅಳೆಯಲಾಗಿದೆ. ಪ್ರತಿಕ್ರಿಯಿಸಿದವರು 18 ವರ್ಷಕ್ಕಿಂತ ಮೇಲ್ಪಟ್ಟವರು.
ಚೀನಾವು 90% ಅನುಮೋದನೆ ರೇಟಿಂಗ್ಗಳನ್ನು ಹೊಂದಿದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿದವು, ಭಾರತವು 87% ನಷ್ಟು ವಿಶ್ವಾಸಾರ್ಹ ರೇಟಿಂಗ್ ಹೊಂದಿದೆ. ಜಪಾನ್ ಮತ್ತು ಯುಎಸ್ ನಂತಹ ದೇಶಗಳು ಟಾಪ್ 10 ಪಟ್ಟಿಯಲ್ಲಿ ಇದ್ದು ಕ್ರಮವಾಗಿ 48% ಅಥವಾ ಅದಕ್ಕಿಂತ ಕಡಿಮೆ ನಂಬಿಕೆಯ ರೇಟಿಂಗ್ಗಳೊಂದಿಗೆ ಅಗ್ರ ಸ್ಥಾನದಲ್ಲಿವೆ. ಈ ಸಮೀಕ್ಷೆಯನ್ನು ಏಪ್ರಿಲ್ 15 ರಿಂದ ಏಪ್ರಿಲ್ 23 ರವರೆಗೆ ನಡೆಸಲಾಯಿತು ಮತ್ತು ಇದನ್ನು ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.