ನವದೆಹಲಿ: ಕೋವಿಡ್-19 ದತ್ತಾಂಶ ವರದಿಯ ಗುಣಮಟ್ಟದ ದೃಷ್ಟಿಯಿಂದ ಕರ್ನಾಟಕವು ಅತ್ಯುತ್ತಮವಾಗಿದೆ ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನ ಹೇಳಿದೆ.
ವರದಿಗಳ ಪ್ರಕಾರ, “ಭಾರತದಾದ್ಯಂತ ಕೋವಿಡ್-19 ದತ್ತಾಂಶ ವರದಿಯ ಗುಣಮಟ್ಟದಲ್ಲಿನ ಅಸಮಾನತೆ” ಎಂಬ ಶೀರ್ಷಿಕೆಯ ಅಧ್ಯಯನವು ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ದತ್ತಾಂಶ ವರದಿಯ ಗುಣಮಟ್ಟವನ್ನು ವಿಶ್ಲೇಷಿಸಿದೆ. ಕರ್ನಾಟಕವು ಈ ವಿಷಯದಲ್ಲಿ ಅತ್ಯುತ್ತಮವಾದರೆ, ಬಿಹಾರ ಮತ್ತು ಉತ್ತರ ಪ್ರದೇಶ ಅತ್ಯಂತ ಕಳಪೆಯಾಗಿದೆ ಎಂದು ಹೇಳಿದೆ.
ಕೋವಿಡ್ ದತ್ತಾಂಶಗಳನ್ನು ಕರ್ನಾಟಕ ಸರಕಾರ ಉತ್ತಮ ರೀತಿಯಲ್ಲಿ ವರದಿ ಮಾಡಿದೆ ಎಂದು ಅಧ್ಯಯನ ಹೇಳಿದೆ. ಕರ್ನಾಟಕವು ದತ್ತಾಂಶಗಳನ್ನು ಹೆಚ್ಚು ಲಭ್ಯವಿರುವಂತೆ ಮತ್ತು ಹೆಚ್ಚು ಪ್ರವೇಶ ಸಿಗುವಂತೆ ಮಾಡಿದೆ. ನಿರಂತರವಾಗಿ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡುತ್ತದೆ. ಡ್ಯಾಶ್ ಬೋರ್ಡ್ ಅನ್ನು ಕೂಡ ಉತ್ತಮವಾಗಿ ನಿರ್ವಹಿಸುತ್ತದೆ ಎಂದು ಅಧ್ಯಯನ ಹೇಳಿದೆ.
ಕರ್ನಾಟಕ ಸರ್ಕಾರವು ಹಂಚಿಕೊಂಡ ದತ್ತಾಂಶದ ಆಧಾರದಲ್ಲಿ ಅಧ್ಯಯನ ಮಾಡಲಾಗಿದೆ ಮತ್ತು ಸಾರ್ವಜನಿಕ ಆರೋಗ್ಯ ದತ್ತಾಂಶ ವರದಿಯ ನಾಲ್ಕು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಅದೆಂದರೆ – ಲಭ್ಯತೆ, ಪ್ರವೇಶಿಸುವಿಕೆ, ಗ್ರ್ಯಾನ್ಯುಲಾರಿಟಿ ಮತ್ತು ಗೌಪ್ಯತೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡಿದ ದತ್ತಾಂಶಗಳನ್ನು ಮೇ 19ರಿಂದ ಜೂನ್ 1ರವರೆಗೆ ಎರಡು ವಾರಗಳಲ್ಲಿ ಅಧ್ಯಯನ ಮಾಡಲಾಗಿದೆ.
ಅಧ್ಯಯನದ ಪ್ರಕಾರ, ಕರ್ನಾಟಕದ ಬಳಿಕ ಕೇರಳ ಒರಿಸ್ಸಾ, ಪುದುಚೇರಿ ಮತ್ತು ತಮಿಳುನಾಡು ಕೂಡ ಉತ್ತಮವಾಗಿದೆ. ಅದರ ಉತ್ತರಪ್ರದೇಶ, ಬಿಹಾರ, ಮೇಘಾಲಯ, ಹಿಮಾಚಲ ಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕಳಪೆ ಸಾಧನೆ ಮಾಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.