ಲೂಧಿಯಾನ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಸಂಘರ್ಷ ನಡೆಸಿದ ಚೀನಾದ ವಿರುದ್ಧ ಭಾರತದಲ್ಲಿ ದೊಡ್ಡ ಮಟ್ಟದಲ್ಲೇ ಆಕ್ರೋಶ ಭುಗಿಲೆದ್ದಿದೆ. ಚೀನಾದ ಪ್ರತಿಯೊಂದು ವಸ್ತುವನ್ನು ಕೂಡ ಬಹಿಷ್ಕರಿಸುವ ಇಚ್ಛಾಶಕ್ತಿಯನ್ನು ಭಾರತೀಯರು ಪ್ರದರ್ಶಿಸುತ್ತಿದ್ದಾರೆ. ಭಾರತದ ಹಲವು ಕಡೆಗಳಲ್ಲಿ ಚೀನಾ ವಸ್ತುಗಳನ್ನು ಮಾರಾಟ ಮಾಡದಂತೆ ಮತ್ತು ಖರೀದಿ ಮಾಡಿದರೆ ಜನರು ಅಭಿಯಾನವನ್ನೇ ಆರಂಭಿಸಿದ್ದಾರೆ.
ಲೂಧಿಯಾನದ ವ್ಯಾಪಾರಿಗಳು ಈ ಬಾರಿಯ ರಕ್ಷಾಬಂಧನದ ಹಬ್ಬವನ್ನು ಚೀನಿ ಬಹಿಷ್ಕಾರದ ಮೂಲಕ ಆಚರಿಸುವ ಪಣತೊಟ್ಟಿದ್ದಾರೆ. ಹೀಗಾಗಿ ಚೀನಾದಲ್ಲಿ ತಯಾರಾದ ರಕ್ಷಾಬಂಧನಗಳನ್ನು ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ. ಸಂಪೂರ್ಣ ದೇಶೀಯವಾಗಿ ತಯಾರಾದ ರಾಖಿಗಳನ್ನು ಮಾತ್ರ ಇಲ್ಲಿನ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ.
ಇಲ್ಲಿನ ಜನರು, ವ್ಯಾಪಾರಿಗಳು ಚೀನಿ ವಸ್ತುಗಳನ್ನು ಖರೀದಿ ಮಾಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಕಳೆದ ವರ್ಷ ನಾವು ಚೀನಾ ತಯಾರಿತ ರಾಖಿಗಳನ್ನು ಖರೀದಿ ಮಾಡಿದ್ದೆವು. ಆದರೆ ಈ ಬಾರಿ ಗಡಿಯಲ್ಲಿನ ಉದ್ವಿಗ್ನತೆಯ ಕಾರಣದಿಂದ ಚೀನಾದ ರಾಖಿಗಳನ್ನು ಖರೀದಿ ಮಾಡದಿರಲು ನಿರ್ಧರಿಸಿದ್ದೇವೆ. ನಮ್ಮ ನೆರೆಹೊರೆಯವರಿಗೆ ಮತ್ತು ಕುಟುಂಬ ಸದಸ್ಯರಿಗೂ ಈ ಬಗ್ಗೆ ಮನವಿ ಮಾಡಿಕೊಂಡಿದ್ದೇವೆ. ನಾವು ಈ ಬಾರಿ ಭಾರತೀಯ ರಾಖಿಗಳನ್ನು ಖರೀದಿ ಮಾಡುತ್ತೇವೆ. ಚೀನಾವನ್ನು ವ್ಯಾವಹಾರಿಕವಾಗಿ ಸೋಲಿಸುವ ಇಚ್ಛಾಶಕ್ತಿಯನ್ನು ಹೊಂದಿದ್ದೇವೆ. ಭಾರತೀಯ ಕಾರ್ಮಿಕ ಶಕ್ತಿಯನ್ನು ಪ್ರೇರೇಪಿಸುವ ಗುರಿ ನಮ್ಮದು. ನಮ್ಮ ನಿರ್ಧಾರದಿಂದ ಭಾರತದಲ್ಲಿ ಉದ್ಯೋಗವಕಾಶಗಳು ಹೆಚ್ಚಾಗುತ್ತದೆ” ಎಂದು ಲೂಧಿಯಾನದ ಸ್ಥಳೀಯ ನಿವಾಸಿ ದೇವಿಂದ್ರ ಕೌರ್ ಹೇಳಿದ್ದಾರೆ.
ಆಗಸ್ಟ್ 3ರಂದು ಈ ವರ್ಷ ರಕ್ಷಾಬಂಧನವನ್ನು ಆಚರಣೆ ಮಾಡಲಾಗುತ್ತಿದೆ. ಒಂದು ವೇಳೆ ಯಾವುದಾದರೂ ಅಂಗಡಿಯಲ್ಲಿ ಚೀನಾದ ರಾಜ್ಯಗಳು ಕಂಡುಬಂದರೆ ಅಂಗಡಿಯಿಂದ ಏನನ್ನೂ ಖರೀದಿ ಮಾಡದಿರಲು ಇಲ್ಲಿನ ಜನರು ನಿರ್ಧರಿಸಿದ್ದಾರೆ.
“ನಮ್ಮ ದೇಶಕ್ಕೆ ಯಾವುದು ಒಳ್ಳೆಯದು ನಾವು ಅದನ್ನೇ ಮಾಡುತ್ತೇವೆ. ಈ ಬಾರಿ ಚೀನಾ ನಿರ್ಮಿತ ರಾಖಿಗಳನ್ನು ನಾವು ಮಾರಾಟ ಮಾಡುವುದಿಲ್ಲ. ನಮ್ಮ ದೇಶದ ಹಣ ನಮ್ಮ ದೇಶದಲ್ಲೇ ಉಳಿಯಬೇಕು. ಇನ್ನೊಂದು ದೇಶದ ಮಿಲಿಟರಿಗೆ ಹೋಗುವುದಕ್ಕೆ ನಾವು ಬಿಡಬಾರದು” ಎಂದು ಇಲ್ಲಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.