ನವದೆಹಲಿ: ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ವೃದ್ಧಿಸುವ ಪ್ರಯತ್ನವಾಗಿ, ಕೇಂದ್ರ ರಕ್ಷಣಾ ಸಚಿವಾಲಯದ ಸ್ವಾಧೀನ ವಿಭಾಗವು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ನೊಂದಿಗೆ ಟ್ಯಾಂಕ್ ಟಿ -90 ಎಸ್/ಎಸ್ಕೆಗಾಗಿ 1,512 Mine Plough (MP) ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಅಂದಾಜು ವೆಚ್ಚ 557 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ವ್ಯಯಿಸಲಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅನುಮೋದನೆಯ ನಂತರ ಸಹಿ ಮಾಡಿ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಈ ಒಪ್ಪಂದದ ಭಾಗದಲ್ಲಿ ಕನಿಷ್ಠ 50 ಪ್ರತಿಶತದಷ್ಟು ಸ್ಥಳೀಯ ವಿಷಯವನ್ನು ಹೊಂದಿರುವ ಖರೀದಿ ಮತ್ತು ನಿರ್ಮಾಣ (ಭಾರತೀಯ) ವರ್ಗೀಕರಣವನ್ನು ಹೊಂದಿದೆ.
ಬಿಇಎಂಎಲ್ ತಯಾರಿಸಿದ ಈ Mine Plough (ಗಣಿ ನೇಗಿಲು)ಗಳನ್ನು ಭಾರತೀಯ ಆರ್ಮರ್ಡ್ ಕಾರ್ಪ್ಸ್ ಟಿ -90 ಟ್ಯಾಂಕ್ಗಳಲ್ಲಿ ಅಳವಡಿಸಲಾಗುತ್ತದೆ, ಇದು ಗಣಿ ಕ್ಷೇತ್ರದಲ್ಲಿ ಕಾರ್ಯಾನಿರ್ವಹಿಸುವಾಗ ಟಿ -90 ಟ್ಯಾಂಕ್ಗಳಿಗೆ ವೈಯಕ್ತಿಕ ಚಲನಶೀಲತೆಗೆ ಅನುಕೂಲ ಮಾಡಿಕೊಡುತ್ತದೆ. ಗಣಿ ನೇಗಿಲುಗಳು ಟ್ಯಾಂಕ್ ಫ್ಲೀಟ್ನ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಅಂತಿಮವಾಗಿ ಶತ್ರು ಪ್ರದೇಶಕ್ಕೆ ಆಳವಾಗಿ ಶಸ್ತ್ರಸಜ್ಜಿತ ರಚನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
ಈ 1,512 Mine Ploughಗಳ ನಿಯೋಜನೆಯನ್ನು, 2027 ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ, ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯವನ್ನು ಇದು ಇನ್ನಷ್ಟು ಹೆಚ್ಚಿಸಲಾಗುವುದು.
ರಷ್ಯಾ ಮೂಲದ ಟಿ -90 ಮುಖ್ಯ ಯುದ್ಧ ಟ್ಯಾಂಕ್ಗಳನ್ನು ಇತ್ತೀಚೆಗೆ ಚೀನಾದೊಂದಿಗಿನ ಗಡಿ ವಿವಾದದ ನಡುವೆ ಲಡಾಖ್ನ ಗಾಲ್ವಾನ್ ವ್ಯಾಲಿ ಸೆಕ್ಟರ್ನಲ್ಲಿ ಭಾರತೀಯ ಸೇನೆಯು ನಿಯೋಜಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.