ನವದೆಹಲಿ: ಭಾರತೀಯ ನೌಕಾಪಡೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಬಳಿ ಯುನೈಟೆಡ್ ಸ್ಟೇಟ್ಸ್ ವಿಮಾನವಾಹಕ ನೌಕೆ ಯುಎಸ್ಎಸ್ ನಿಮಿಟ್ಜ್ ಮತ್ತು ಅದರ ಇತರ ಯುದ್ಧನೌಕೆಗಳೊಂದಿಗೆ ಜಂಟಿ ಸಮರಾಭ್ಯಾಸವನ್ನು ನಡೆಸಲು ಸಜ್ಜಾಗಿದ್ದು, ಇದು ಚೀನಾಕ್ಕೆ ಬಲವಾದ ಕಾರ್ಯತಂತ್ರದ ಸಂಕೇತವನ್ನು ರವಾನಿಸುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.
ಭಾರತದ ಎರಡು ನೌಕೆಗಳು ಯುಎಸ್ಎಸ್ ನಿಮಿಟ್ಜ್ ನೊಂದಿಗೆ ಪಾಸೆಕ್ಸ್ (ಹಾದುಹೋಗುವ ವ್ಯಾಯಾಮ) ನಡೆಸಲಿವೆ. ಇದು ಈ ಹಿಂದೆ ದಕ್ಷಿಣ ಚೀನಾ ಸಮುದ್ರದಲ್ಲಿ ಮೆಗಾ ವ್ಯಾಯಾಮವನ್ನು ನಡೆಸಿ, ಜುಲೈ 18ರಂದು ಮಲಾಕ್ಕಾ ಜಲಸಂಧಿಯನ್ನು ದಾಟಿದ ನಂತರ ಹಿಂದೂ ಮಹಾಸಾಗರವನ್ನು ಪ್ರವೇಶಿಸಿತು.
ಪೂರ್ವ ನೌಕಾ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಸಂಜಯ್ ವತ್ಸಯನ್ ನೇತೃತ್ವದ ಈ ಭಾರತ-ಯುಎಸ್ ಜಂಟಿ ಸಮರಾಭ್ಯಾಸವು, ವಿಧ್ವಂಸಕಗಳು (destroyers), ಜಲಾಂತರ್ಗಾಮಿ ನೌಕೆಗಳು, ಯುದ್ಧ ನೌಕೆಗಳು ಮತ್ತು ಗಸ್ತು ವಿಮಾನಗಳು ಸೇರಿದಂತೆ ವಿವಿಧ ಭಾರತೀಯ ಯುದ್ಧನೌಕೆಗಳನ್ನು ಒಳಗೊಂಡಿರುತ್ತದೆ.
ಈ ಸಮರಾಭ್ಯಾಸವನ್ನು ನೌಕಾ ಪ್ರದೇಶದಲ್ಲಿ ನಡೆಸಲಾಗುವುದು, ಇದು ಚೀನಾದ ನಿರ್ಣಾಯಕ ಸಮುದ್ರ ವ್ಯಾಪಾರ ಮಾರ್ಗಗಳಿಂದ ಸುತ್ತುವರೆದಿದೆ ಎಂದು ಹೇಳಲಾಗಿದೆ.
ಭಾರತೀಯ ನೌಕಾಪಡೆಯ ಈ ಸಮರಾಭ್ಯಾಸವು ಚೀನಾದೊಂದಿಗಿನ ಭಾರತದ ಉದ್ವಿಗ್ನತೆ ಮತ್ತು ಅಮೆರಿಕಾದ ವಾಗ್ಯುದ್ಧದ ಸಂದರ್ಭದಲ್ಲಿ ನಡೆಯುತ್ತಿರುವುದು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.