ನ್ಯೂಯಾರ್ಕ್: ಎಂಟು ಅಡಿ ಎತ್ತರದ ವೆಂಕಟೇಶ್ವರ ಮೂರ್ತಿಯೊಂದಿಗೆ ವೆಂಕಟೇಶ್ವರ ದೇವಾಲಯವು ಅಮೇರಿಕದ ಒಹಿಯೋ ರಾಜ್ಯದ ಕೊಲಂಬಸ್ನಲ್ಲಿ ನಿರ್ಮಾಣಗೊಳ್ಳಲಿದೆ.
ಸುಮಾರು 20 ಸಾವಿರ ಚದರ ಅಡಿಯ ಜಾಗದಲ್ಲಿ ಶಿಲ್ಪಕಲೆಯೊಂದಿಗೆ ನಿರ್ಮಾಣಗೊಳ್ಳಲಿರುವ ಈ ದೇವಾಲಯದಲ್ಲಿ ವೆಂಕಟೇಶ್ವರ, ಗಣೇಶ, ಹನುಮಂತ, ಗರುಡ ದೇವರ ಮೂರ್ತಿಯನ್ನು ಸ್ಥಾಪಿನೆಗೊಳ್ಳಲಿದೆ. ಜು.30ರಿಂದ ಆ.2ರ ವರೆಗೆ ನಿರ್ಮಾಣ ಕಾಮಗಾರಿ ಚಾಲನೆ ಪ್ರಯುಕ್ತ ಸಮಾರಂಭ ನಡೆಯಲಿದ್ದು, ಈ ದೇವಾಲಯದಲ್ಲಿ 1000 ಭಕ್ತಾದಿಗಳಿಗೆ ಸ್ಥಳಾವಕಾಶವಿದೆ.
1994ರಲ್ಲಿ ನಿರ್ಮಿಸಲಾದ ಭಾರತೀಯ ಹಿಂದೂ ದೇವಾಲದ ನಂತರ ಈವರೆಗಿನ ಎರಡನೇ ಹಿಂದೂ ದೇವಾಲಯ ಇದಾಗಲಿದೆ ಎಂದು ದೇವಾಲಯ ಸಮಿತಿ ವಕ್ತಾರ ಗಣೇಶ್ವತ್ಯಂ ಹೇಳಿದ್ದಾರೆ. ಇದರ ಆರಂಭಿಕ ವೆಚ್ಚ 3 ಮಿಲಿಯನ್ ಡಾಲರ್ ಆಗಲಿದೆ ಎಂದು ಹೇಳಲಾಗಿದೆ.
ಈ ದೇವಾಲಯದ ನಿರ್ಮಾಣಕ್ಕೆ ಭಾರತದಿಂದ ಶಿಲ್ಪಿಗಳನ್ನು ಕರೆಸಲಾಗುತ್ತಿದ್ದು, ದೇಗುಲವು ತಾಮ್ರ ಅಥವಾ ಕಂಚಿನ ಧ್ವಜಸ್ಥಂಭ, ವಿವಿಧ ಬಣ್ಣಗಳ ಗೋಪುರ ಹೊಂದಲಿದೆ ಎಂದು ತಿಳಿಸಿದ್ದಾರೆ. ಒಹಿಯೊ ರಾಜ್ಯದ ಒಂದು ಕಲಾತ್ಮಕ ದೇವಾಲಯ ಇದಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.