ನವದೆಹಲಿ: ಚೀನಾದ ಜಾಗತಿಕ ದೈತ್ಯ ಸಂಸ್ಥೆಗಳಾದ ಹುವಾವೇ, ಅಲಿಬಾಬಾ ಮತ್ತು ಇತರ ಸಂಸ್ಥೆಗಳು ಚೀನಾದ ಸೈನ್ಯದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಕ್ರಮವನ್ನು ಎದುರಿಸಲಿವೆ ಎಂದು ಮೂಲಗಳು ತಿಳಿಸಿವೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಯೊಂದಿಗೆ ಆಳವಾದ ಸಂಪರ್ಕವನ್ನು ಈ ಕಂಪನಿಗಳು ಹೊಂದಿದೆ ಎಂದು ಸರ್ಕಾರದ ಮೂಲಗಳು ಹೇಳಿಕೊಂಡಿವೆ.
ಕಣ್ಗಾವಲಿನಲ್ಲಿ ಇರುವ 7 ಚೀನೀ ಕಂಪನಿಗಳೆಂದರೆ ಕ್ಸಿಂಡಿಯಾ ಸ್ಟೀಲ್ಸ್, ಕ್ಸಿನ್ಕ್ಸಿಂಗ್ ಕ್ಯಾಥೆ ಇಂಟರ್ನ್ಯಾಷನಲ್, ಚೀನಾ ಎಲೆಕ್ಟ್ರಾನಿಕ್ ಟೆಕ್ನಾಲಜಿ ಗ್ರೂಪ್, ಹುವಾವೇ, ಅಲಿಬಾಬಾ, ಟೆನ್ಸೆಂಟ್, ಎಸ್ಎಐಸಿ ಮೋಟಾರ್ ಕಾರ್ಪೊರೇಶನ್. ಸರ್ಕಾರದ ಮೂಲಗಳು “ಈ ಕಂಪನಿಗಳು ಕಣ್ಗಾವಲಿನಲ್ಲಿ ಇದೆ ಮತ್ತು ಸಂಭಾವ್ಯ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದೆ.
ಚೀನಾದ ಟೆಲಿಕಾಂ ಕಂಪನಿ ಹುವಾವೇ ತನ್ನ ಭಾರತೀಯ ನಿರ್ವಾಹಕರಿಂದ 2018-19ನೇ ಹಣಕಾಸು ವರ್ಷದಲ್ಲಿ 12800 ಕೋಟಿ ರೂ.ಆದಾಯವನ್ನು ಪಡೆದುಕೊಂಡಿದೆ. ಈ ಕಂಪನಿಯನ್ನು ರೆನ್ ಝೆಂಗ್ಫೆ ಅವರು ಸ್ಥಾಪಿಸಿದ್ದಾರೆ. ಇವರು ಪಿಎಲ್ಎಯ ಎಂಜಿನಿಯರಿಂಗ್ ಕಾರ್ಪ್ಸ್ನ ಮಾಜಿ ಉಪ ನಿರ್ದೇಶಕರಾಗಿದ್ದರು.
ಅಲಿಬಾಬಾ, ಬೈದು, ಟೆನ್ಸೆಂಟ್ನ ಮೂಲಗಳು ಚೀನಾದ ಮಿಲಿಟರಿ-ನಾಗರಿಕ ಸಮ್ಮಿಳನ ಮತ್ತು ಕೃತಕ ಗುಪ್ತಚರ ಯೋಜನೆಗಳ ಭಾಗವಾಗಿದೆ ಎಂದು ಹೇಳಲಾಗಿದೆ.
ಪೇಟಿಎಂ, ಝೊಮಾಟೊ, ಬಿಗ್ ಬಾಸ್ಕೆಟ್, ಸ್ನ್ಯಾಪ್ಡೀಲ್, ಎಕ್ಸ್ಪ್ರೆಸ್ಬೀಸ್ ಸೇರಿದಂತೆ ಅಲಿಬಾಬಾ ಭಾರತೀಯ ಸ್ಟಾರ್ಟ್ ಅಪ್ಗಳಲ್ಲಿ ಹೂಡಿಕೆ ಮಾಡಿದೆ. ಟೆನ್ಸೆಂಟ್ ಓಲಾ ಕ್ಯಾಬ್ಗಳಲ್ಲಿ $ 400 ಮಿಲಿಯನ್, ಫ್ಲಿಪ್ಕಾರ್ಟ್ನಲ್ಲಿ $ 700 ಮಿಲಿಯನ್ ಸೇರಿದಂತೆ ಭಾರತೀಯ ಟೆಕ್ ವೇದಿಕೆಯಲ್ಲಿ ಇದು ಮೆಗಾ ಹೂಡಿಕೆ ಮಾಡಿದೆ.
ಚೀನಾದ ಸೈನ್ಯದೊಂದಿಗೆ ಸಂಪರ್ಕ ಹೊಂದಿರುವ ಚೀನೀ ಕಂಪನಿಗಳು ಸಕ್ರಿಯವಾಗಿರುವುದು ಕೇವಲ ಟೆಕ್ ಅಥವಾ ಮೊಬೈಲ್ ವಲಯದಲ್ಲಿ ಮಾತ್ರವಲ್ಲ, ಶಾಂಘೈ ಪ್ರಧಾನ ಕಚೇರಿಯನ್ನು ಹೊಂದಿರುವ ಚೀನಾದ ಸರ್ಕಾರಿ ಸ್ವಾಮ್ಯದ ಆಟೋಮೊಬೈಲ್ ಕಂಪನಿಯಾದ ಎಸ್ಎಐಸಿ ಮೋಟಾರ್ ಕಾರ್ಪೊರೇಷನ್ ಭಾರತದಲ್ಲಿ ಸ್ಪೋರ್ಟ್ ಯುಟಿಲಿಟಿ ವಾಹನ ಎಂಜಿ ಹೆಕ್ಟರ್ ಅನ್ನು ಮಾರಾಟ ಮಾಡುತ್ತದೆ. ಕಂಪನಿಯ ಅಂಗಸಂಸ್ಥೆಗಳಲ್ಲಿ ಒಂದಾದ ನಾನ್ಜಿಂಗ್ ಆಟೋಮೊಬೈಲ್ ಈ ಹಿಂದೆ ಪಿಎಲ್ಎಯ ವಾಹನ ಸೇವಾ ಘಟಕವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.