ಮುಂಬೈ: ಕಳೆದ ಮಾರ್ಚ್ ತಿಂಗಳಿನಿಂದ ಸರ್ಕಾರಗಳ, ಜನರ ನಿದ್ದೆಗೆಡಿಸಿರುವ ಕೊರೋನಾ ಸಂಕಷ್ಟ, ಲಾಕ್ಡೌನ್ ಅವಧಿಯ ಸಂದರ್ಭದಲ್ಲಿ ಅನೇಕ ಜನರಿಗೆ ನೆರವಾಗಿರುವ ಹೆಸರಾಂತ ನಟ ಸೋನು ಸೂದ್ ಇದೀಗ ಮುಂಬೈ ಪೊಲೀಸರಿಗೂ ನೆರವಿನ ಹಸ್ತ ಚಾಚಿದ್ದಾರೆ. 25000 ಫೇಸ್ ಶೀಲ್ಡ್ ಒದಗಿಸಿ ಕೊಡುವ ಮೂಲಕ ಕೊರೋನಾ ವಾರಿಯರ್ಸ್ ಗೆ ಸಹಾಯ ಮಾಡಿದ್ದಾರೆ.
ದೇಶದ ಅತೀ ದೊಡ್ಡ ಕೊರೋನಾ ಹಾಟ್ಸ್ಪಾಟ್ ಎಂದೇ ಬಿಂಬಿತವಾಗಿರುವ ಮುಂಬೈ ಪೊಲೀಸರಿಗೆ ಸೋನು ಸೂದ್ ಫೇಸ್ ಶೀಲ್ಡ್ ಹಂಚಿದ್ದಾರೆ. ಈ ಹಿಂದಿನ ಲಾಕ್ಡೌನ್ ಅವಧಿಯಲ್ಲಿ ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ವಲಸಿಗ ಕಾರ್ಮಿಕರಿಗೆ ಆಹಾರ, ಅವರಿಗೆ ತಮ್ಮ ತಮ್ಮ ರಾಜ್ಯಗಳಿಗೆ, ತಮ್ಮ ತಮ್ಮ ಊರುಗಳಿಗೆ ತೆರಳಲು ಪೂರಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದ ನಟ ಸೋನು ಸೂದ್, ಇದೀಗ ಮುಂಬೈ ಪೊಲೀಸರಿಗೂ ನೆರವಿನ ಹಸ್ತ ಚಾಚಿದ್ದಾರೆ.
ಸೂದ್ ಅವರು 25,000 ಫೇಸ್ ಶೀಲ್ಡ್ ಖರೀದಿಸಿ ಅದನ್ನು ಪೊಲೀಸ್ ಸಿಬ್ಬಂದಿಗಳಿಗೆ ಒದಗಿಸಿರುವ ಬಗ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರ ದ ಗೃಹಸಚಿವ ಅನಿಲ್ ದೇಶ್ ಮುಖ್ ಸೋನು ಸೂದ್ ಅವರ ಕರ್ತವ್ಯಪ್ರಜ್ಞೆಗೆ ಧನ್ಯವಾದ ಸಮರ್ಪಿಸಿದ್ದಾರೆ.
ಮಹಾಮಾರಿ ಕೋವಿಡ್-19 ಗೆ ಮಹಾರಾಷ್ಟ್ರದಲ್ಲಿ ಈ ವರೆಗೂ 6,400 ರಷ್ಟು ಪೊಲೀಸ್ ಸಿಬ್ಬಂದಿ ತುತ್ತಾಗಿದ್ದು, 48 ಮಂದಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ 1213 ಮಂದಿ ಪೊಲೀಸರು ನಗರದ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5100 ಮಂದಿ ಚೇತರಿಸಿಕೊಂಡಿದ್ದಾಗಿಯೂ ವರದಿಗಳು ಮಾಹಿತಿ ನೀಡಿವೆ.
I thank @SonuSood Ji for your generous contribution of giving 25,000 #FaceShields for our police personnel. pic.twitter.com/bojGZghy23
— ANIL DESHMUKH (@AnilDeshmukhNCP) July 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.