ನವದೆಹಲಿ: ಆಸ್ತಿ ನೋಂದಣಿ ಹಾಗೂ ಬಾಡಿಗೆ ಕರಾರು ಪತ್ರವನ್ನು ಆನ್ಲೈನ್ ಮೂಲಕವೇ ಪಡೆಯಬಹುದಾದ ಹೊಸ ಯೋಜನೆಯನ್ನು ದೆಹಲಿ ಸರ್ಕಾರ ರೂಪಿಸಿದೆ.
ಮುಂದಿನ ಮೂರು-ನಾಲ್ಕು ತಿಂಗಳೊಳಗೆ ಈ ಯೋಜನೆ ಜಾರಿಗೆ ಬರಲಿದ್ದು, ಇನ್ನು ಮುಂದೆ ಇಲ್ಲಿನ ನಿವಾಸಿಗಳು ಆಸ್ತಿ ನೋಂದಾಯಿಸಲು ಉಪನೋಂದಣಿ ಕಚೇರಿಗೆ ತೆರಳುವ ಅಥವಾ ಇನ್ನಿತರ ದಾಖಲೆಗಳು, ಬಾಡಿಗೆ ಕರಾರು, ಅಧಿಕಾರ ಪತ್ರಗಳಿಗೆ ಅಲೆಯಬೇಕಾಗಿಲ್ಲ. ಎಲ್ಲವನ್ನೂ ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ.
ವಿಭಾಗೀಯ ಆಯುಕ್ತ ಅಶ್ವನಿ ಕುಮಾರ್, ಈ ಯೋಜನೆ ಮೂಲಕ ಕೊಳ್ಳುಗರು ಆನ್ಲೈನ್ ಮೂಲಕವೇ ನೋಂದಣಿ ಹಣ, ಸ್ಟ್ಯಾಂಪ್ ಡ್ಯೂಟಿ, ಮಾರಾಟದ ದಾಖಲೆ (ಸೇಲ್ ಡೀಡ್ಸ್)ಗಳನ್ನು ಪಡೆಯಪಹುದು ಎಂದು ತಿಳಿಸಿದ್ದಾರೆ. ಉಪ ನೋಂದಣಿ ಕಚೇರಿಯಲ್ಲಿಯೂ ನೋದಣಿ ಕಾರ್ಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.