ನವದೆಹಲಿ: ಅತಿ ಹೆಚ್ಚು ಆದಾಯ ಗಳಿಸಿ ಶ್ರೀಮಂತರು ಎನಿಸಿಕೊಂಡ ಸುಮಾರು 61 ಸಾವಿರ ಮಂದಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂಬುದನ್ನು ವರದಿಯೊಂದು ತಿಳಿಸಿದೆ.
ನ್ಯೂ ವರ್ಲ್ಡ್ ವೆಲ್ತ್ ಮತ್ತು ಎಲ್ಈಒ ಗ್ಲೋಬಲ್ ಸಂಸ್ಥೆ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಭಾರತೀಯ ಶ್ರೀಮಂತರು ಅತಿ ಹೆಚ್ಚು ಸಂಖ್ಯೆಯಲ್ಲಿ ಬೇರೆ ದೇಶದ ಪೌರತ್ವಕ್ಕೆ ಅರ್ಜಿ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತೆರಿಗೆ, ಭದ್ರತೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಭಾರತೀಯ ಶ್ರಿಮಂತರು ಇಂಗ್ಲೆಂಡ್, ಅಮೆರಿಕ, ದುಬೈ, ಆಸ್ಟ್ರೇಲಿಯಾದಂತಹ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. 2000ರಿಂದ 2014ರವರೆಗೆ ಸುಮಾರು 61 ಸಾವಿರ ಶ್ರೀಮಂತರು ಬೇರೆ ಬೇರೆ ದೇಶಗಳಿಗೆ ತಮ್ಮ ವಾಸವನ್ನು ಬದಲಾಯಿಸಿಕೊಂಡಿದ್ದಾರೆ.
ವಲಸೆ ಹೋಗುವವರ ಪಟ್ಟಿಯಲ್ಲಿ ಚೀನಾ ಮೊದಲನೇ ಸ್ಥಾನ ಪಡೆದುಕೊಂಡಿದೆ. 14ವರ್ಷದಲ್ಲಿ ಇಲ್ಲಿನ 91ಸಾವಿರ ಶ್ರೀಮಂತರು ವಲಸೆ ಹೋಗಿದ್ದಾರೆ. ಎರಡನೇ ಸ್ಥಾನ ಭಾರತದ್ದಾಗಿದೆ. ಚೀನಿಯರು ಸಿಂಗಾಪುರ, ಹಾಂಕ್ಕಾಂಗ್, ಅಮೆರಿಕ ಮತ್ತು ಲಂಡನ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪಲಾಯನ ಮಾಡುತ್ತಿದ್ದಾರೆ.
ಫ್ರಾನ್ಸ್, ಇಟಲಿ, ರಷ್ಯಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಈಜಿಪ್ಟ್ನ ಶ್ರೀಮಂತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಲಾಯನ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇಂಗ್ಲೆಂಡ್ನಲ್ಲಿ ಶ್ರೀಮಂತ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಕಳೆದ 14 ವರ್ಷದಲ್ಲಿ ಸುಮಾರು 1.25 ಲಕ್ಷ ವಿವಿಧ ದೇಶಗಳ ಶ್ರೀಮಂತರು ಇಲ್ಲಿಗೆ ಆಗಮಿಸಿದ್ದಾರೆ. ಅಮೆರಿಕ ಮತ್ತು ಸಿಂಗಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಂತರು ವಲಸೆ ಹೋಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.