ರಾಯ್ಪುರ್: ಸ್ವಂತ ಪ್ರಯತ್ನದಿಂದ ಸರ್ಕಾರದ ಯಾವುದೇ ಸಹಾಯವನ್ನು ಪಡೆಯದೆ ‘ಬಯಲು ಶೌಚ ಮುಕ್ತ’ಗೊಂಡ ಛತ್ತೀಸ್ಗಢ ರಾಜನ್ದ್ಗಾಂವ್ನ ಕೇಶಲ ಗ್ರಾಮ ಪ್ರಧಾನಿ ನರೇಂದ್ರ ಮೋದಿಯವರ ಶಬ್ಬಾಶ್ಗಿರಿಯನ್ನು ಪಡೆದಿದೆ.
ಭಾನುವಾರ ರೇಡಿಯೋದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಕೇಶಲ ಗ್ರಾಮವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಗ್ರಾಮಸ್ಥರ ಪರಿಶ್ರಮಕ್ಕೆ ಭೇಷ್ ಎಂದಿದ್ದಾರೆ.
ಕೇಶಲ ಗ್ರಾಮದಲ್ಲಿ ಇಬ್ಬರು ಸಹೋದರರು ‘ರಕ್ಷಾ ಬಂಧನ’ದ ಉಡುಗೊರೆಯಾಗಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟರು. ಬಳಿಕ ಇದೊಂದು ಆಂದೋಲನವಾಗಿ ರೂಪುಗೊಂಡು ಎಲ್ಲಾ ಗ್ರಾಮಸ್ಥರು ಒಗ್ಗೂಡಿ ಶೌಚಾಲಯ ನಿರ್ಮಿಸುವ ಕಾಯಕ ಆರಂಭಿಸಿದರು. ಇವರ ಪರಿಶ್ರಮವಾಗಿ ಈಗ ಇಡೀ ಗ್ರಾಮವೇ ಬಯಲು ಶೌಚ ಮುಕ್ತಗೊಂಡಿದೆ. ಯಾರಾದರು ಬಯಲಿನಲ್ಲಿ ಶೌಚ ಮಾಡುವುದು ಕಂಡು ಬಂದರೆ ಅವರಿಗೆ 500 ರೂಪಾಯಿ ದಂಡ ವಿಧಿಸುವ ನಿಯಮವನ್ನೂ ಇಲ್ಲಿ ಜಾರಿಗೊಳಿಸಲಾಗಿದೆ.
ಸರ್ಕಾರದ ಯಾವುದೇ ಧನ ಸಹಾಯ ಪಡೆಯದೇ, ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತಗೊಂಡು ಈ ಅಭಿಯಾನ ಆರಂಭಿಸಿದ್ದಾಗಿ ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಅಲ್ಲದೇ ತಮ್ಮ ಗ್ರಾಮದ ಹೆಸರನ್ನು ಮೋದಿ ಮನ್ ಕೀ ಬಾತ್ನಲ್ಲಿ ಉಲ್ಲೇಖಿಸಿದ್ದಕ್ಕಾಗಿ ಈ ಗ್ರಾಮಸ್ಥರು ಅತೀವ ಸಂತೋಷಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.