ನವದೆಹಲಿ: ಆಗಸ್ಟ್ 1 ರೊಳಗೆ ಹೊಸ ಉತ್ಪನ್ನಗಳ ಮೂಲ ದೇಶವನ್ನು ಉಲ್ಲೇಖಿಸಬೇಕು ಎಂದು ಸರ್ಕಾರ ಭಾರತದ ಪ್ರಮುಖ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾಟ್ಗಳಿಗೆ ಸೂಚಿಸಿದೆ.
ಬುಧವಾರ ಸರ್ಕಾರಿ ಅಧಿಕಾರಿಗಳೊಂದಿಗೆ ಆನ್ಲೈನ್ ಸಭೆ ನಡೆಸಿದ ಇ-ಕಾಮರ್ಸ್ ಕಂಪನಿಗಳು, ಆಮದುಗಳನ್ನು ನಿಗ್ರಹಿಸುವ ಕೇಂದ್ರದ ಪ್ರಯತ್ನಗಳ ಭಾಗವಾಗಿರುವ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಕೋರಿವೆ.
“ಹೊಸ ಪಟ್ಟಿಗಳನ್ನು ಆಗಸ್ಟ್ 1 ರೊಳಗೆ ನವೀಕರಿಸಬೇಕೆಂದು ಸರ್ಕಾರ ಬಯಸಿದೆ. ಹೊಸದಾದ ಕೆಲಸಗಳು ಆದಷ್ಟು ಬೇಗ ಪ್ರಾರಂಭಿಸಲು ನಿರ್ಧರಿಸಿದ್ದೇವೆ” ಎಂದು ಕಂಪನಿಯ ಅಧಿಕಾರಿಯೊಬ್ಬರು ವರ್ಚುವಲ್ ಸಭೆಯಲ್ಲಿ ಹೇಳಿದ್ದಾರೆ.
ಮೂಲ ದೇಶದ ಮಾಹಿತಿಯನ್ನು ಪ್ರದರ್ಶಿಸಲು ಅಂತಿಮ ಗಡುವನ್ನು ಶೀಘ್ರದಲ್ಲೇ ಸರ್ಕಾರ ಹೊರಡಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಪ್ಯಾಕೇಜ್ ಮಾಡಿದ ಸರಕುಗಳ ಮೇಲೆ ಮೂಲ ದೇಶವನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ವರದಿಗಳು ಹೇಳಿವೆ.
ತಯಾರಕರು ಮತ್ತು ಮಾರಾಟಗಾರರ ಪಾಲ್ಗೊಳ್ಳುವಿಕೆಯೊಂದಿಗೆ ಹಂತ ಹಂತವಾಗಿ ಕ್ರಮಗಳನ್ನು ಪರಿಚಯಿಸುತ್ತೇವೆ ಎಂದು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ತಿಳಿಸಿವೆ.
ವರ್ಚುವಲ್ ಸಭೆಯಲ್ಲಿ ಅಮೆಜಾನ್, ಫ್ಲಿಪ್ಕಾರ್ಟ್, ಜಿಯೋ, ಶಾಪರ್ಸ್ ಸ್ಟಾಪ್, ಸ್ನ್ಯಾಪ್ಡೀಲ್, ಹೋಮ್ಶಾಪ್ 18, ಟಾಟಾ ಕ್ಲಿಕ್, ಸ್ವಿಗ್ಗಿ ಮತ್ತು ಝೋಮಾಟೊ ಸೇರಿದಂತೆ 30 ಇ-ಕಾಮರ್ಸ್ ಸೈಟ್ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.