ನವದೆಹಲಿ: ಚೀನಾ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರಕಾರ ಇತ್ತೀಚಿಗೆ ಟಿಕ್ ಟಾಕ್ ಸೇರಿದಂತೆ 59 ಚೀನಿ ಮೂಲದ ಅ್ಯಪ್ಗಳನ್ನು ನಿಷೇಧಿಸಿತ್ತು.
ಟಿಕ್ ಟಾಕ್ ಸಣ್ಣ ವಿಡಿಯೋ ತುಣುಕುಗಳನ್ನು ಹಂಚುವ ಜನಪ್ರಿಯ ಅ್ಯಪ್ ಆಗಿತ್ತು. ಟಿಕ್ ಟಾಕ್ಗೆ ಪರ್ಯಾಯವಾಗಿ ದೇಶಿಯ ಮಿತ್ರೋನ್, ಚಿಂಗಾರಿ ಹಾಗೂ ರೊಪೋಸೋ ಅ್ಯಪ್ ಜನಪ್ರಿಯತೆ ಗಳಿಸಿದೆ. ಇದರಲ್ಲಿ ಹರಿಯಾಣ ಮೂಲದ ರೊಪೋಸೋ ಅ್ಯಪ್ 85 ಮಿಲಿಯನ್ ಡೌನ್ ಲೋಡ್ ಕಂಡಿದ್ದು ಮುಂದಿನ ಕೆಲ ದಿನಗಳಲ್ಲಿ 100 ಮಿಲಿಯನ್ ಬಳಕೆದಾರರನ್ನು ಹೊಂದಲಿದೆ. ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ಟಾಪ್ ಡೌನ್ಲೋಡ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಟಾಪ್ ಫ್ರೀ ಆ್ಯಪ್ಗಳ ಪಟ್ಟಿಯಲ್ಲಿ ಅತಿ ಹೆಚ್ಚು ಡೌನ್ಲೋಡ್ ಕಂಡ ಗರಿಮೆಯನ್ನು ರೊಪೋಸೋ ಆ್ಯಪ್ ಪಡೆದಿದೆ. ಪ್ರತಿದಿನ 3 ಲಕ್ಷಕ್ಕೂ ಅಧಿಕ ಹೊಸ ವಿಡಿಯೋ ಈ ಆ್ಯಪ್ ಮೂಲಕ ಹಂಚಿಕೆಯಾಗುತ್ತಿದೆ.
ಈ ಆ್ಯಪ್ ಅನ್ನು ಇಂಗ್ಲೀಷ್, ಹಿಂದಿ, ಕನ್ನಡ, ತಮಿಳು, ತೆಲುಗು, ಗುಜರಾತಿ, ಪಂಜಾಬಿ, ಮರಾಠಿ, ಬೆಂಗಾಲಿ ಮತ್ತು ಮಲಯಾಳಂ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಬಳಸಬಹುದು.
ಭಾರತ ಸರ್ಕಾರ ಆರಂಭಿಸಿರುವ ನಾಗರಿಕ ಪಾಲ್ಗೊಳ್ಳುವಿಕೆ ಫ್ಲಾಟ್ಫಾರ್ಮ್ ಆಗಿರುವ MyGov ಈಗಾಗಲೇ ರೊಪೋಸೋದಲ್ಲಿದೆ.
ರೊಪೋಸೋವನ್ನು ಮೂವರು ಐಐಟಿ ದೆಹಲಿ ಇಂಜಿನಿಯರ್ಗಳು ಸ್ಥಾಪಿಸಿದ್ದು, ಇದರಲ್ಲಿ ಅತ್ಯುತ್ತಮವಾದ ವಿಡಿಯೋ ಎಡಿಟಿಂಗ್ ಟೂಲ್ಗಳು ಇವೆ. ತಮ್ಮದೇ ಆದ ಮಾತೃಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ. ಈ ಮೂಲಕ ರೊಪೋಸೊ ಭಾರತದ ನಂಬರ್ ಒನ್ ಶಾರ್ಟ್ ವಿಡಿಯೋ ಅ್ಯಪ್ ಆಗಿ ಹೊರ ಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.