ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆನ್ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಮಂಗಳ ಗ್ರಹದ ನಿಗೂಢ ಚಂದ್ರನೆಂದೇ ಕರೆಯಲ್ಪಡುವ ಫೋಬೊಸ್ನ ಚಿತ್ರವನ್ನು ಸೆರೆಹಿಡಿದಿದೆ.
ಜುಲೈ 1ರಂದು ಮಾರ್ಸ್ ಆರ್ಬಿಟರಿ ಮಿಷನ್ನ ಈ ಕ್ಯಾಮೆರಾ ಮಂಗಳ ಗ್ರಹದಿಂದ 7,200 ಕಿ.ಮೀ ಮತ್ತು ಫೋಬೋಸ್ನಿಂದ 4,200 ಕಿ.ಮೀ ದೂರದಲ್ಲಿದ್ದಾಗ ಈ ಚಿತ್ರವನ್ನು ತೆಗೆದಿದೆ. ಮಂಗಳಗ್ರಹದ ಎರಡು ಉಪಗ್ರಹಗಳಲ್ಲಿ ಫೋಬೊಸ್ ಕೂಡ ಒಂದು. ಇದನ್ನು ಅತೀದೊಡ್ಡ ಚಂದ್ರನೆಂದೇ ಗುರುತಿಸಲಾಗುತ್ತದೆ.
“ಈ ಚಿತ್ರದ ರೆಸಲ್ಯೂಶನ್ 210 ಮೀ ಆಗಿದೆ. ಇದು 6 ಎಂಸಿಸಿ ಫ್ರೇಮ್ಗಳಿಂದ ಉತ್ಪತ್ತಿಯಾದ ಸಂಯೋಜಿತ ಚಿತ್ರವಾಗಿದೆ ಮತ್ತು ಇದರ ಬಣ್ಣವನ್ನು ಸರಿಪಡಿಸಲಾಗಿದೆ” ಎಂದು ಇಸ್ರೋ ತಿಳಿಸಿದೆ.
ಫೋಬೊಸ್ ಹೆಚ್ಚಾಗಿ ಕಾರ್ಬೊನೇಸಿಯನ್ ಕೊಂಡ್ರೈಟ್ಗಳಿಂದ ಕೂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ, ಫೋಬೊಸ್ ಹಿಂದೆ ಎದುರಿಸಿದ ಘರ್ಷಣೆಯು (Stickney) ಈ ಚಿತ್ರದಲ್ಲಿ ದೊಡ್ಡದಾಗಿ ಗೋಚರಿಸಿದೆ. Stickney ಕುಳಿ ಫೋಬೊಸ್ನ ಅತೀದೊಡ್ಡ ಕುಳಿಯಾಗಿದೆ.
ಈ ಚಿತ್ರದಲ್ಲಿ ಶ್ಕ್ಲೋವಸ್ಕಿ, ರೋಚೆ ಮತ್ತು ಗ್ರಿಲ್ಡ್ರಿಗ್ ಮುಂತಾದ ಕುಳಿಗಳನ್ನೂ ಕಾಣಬಹುದಾಗಿದೆ.
ಭಾರತವು ಸೆಪ್ಟೆಂಬರ್ 24, 2014 ರಂದು ಮಾರ್ಸ್ ಆರ್ಬಿಟರ್ ಮಿಷನ್ ಬಾಹ್ಯಾಕಾಶ ನೌಕೆಯನ್ನು ಕೆಂಪು ಗ್ರಹ ಮಂಗಳದ ಸುತ್ತ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿತ್ತು. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ ಮೊದಲ ದೇಶ ಎಂಬ ಹೆಮ್ಮೆಗೆ ಪಾತ್ರವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.