ನವದೆಹಲಿ: ಪೂರ್ವ ಲಡಾಕ್ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿ ನಡೆದ ಕೆಲವೇ ದಿನಗಳಲ್ಲಿ 59 ಚೀನೀ ಆ್ಯಪ್ಗಳನ್ನು ನಿಷೇಧಿಸಿದ ಭಾರತದ ದಿಟ್ಟ ಕ್ರಮವನ್ನು “ಡಿಜಿಟಲ್ ಸ್ಟ್ರೈಕ್” ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
“ದೇಶವಾಸಿಗಳ ಡೇಟಾವನ್ನು ರಕ್ಷಿಸಲು ನಾವು ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್ ಸ್ಟ್ರೈಕ್” ಎಂದು ಬಂಗಾಳದಲ್ಲಿ ಇಂದು ನಡೆದ ಬಿಜೆಪಿ ವರ್ಚುವಲ್ ಸಮಾವೇಶದಲ್ಲಿ ಪ್ರಸಾದ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಭಾರತವು ಶಾಂತಿಗಾಗಿ ಇದೆ, ಆದರೆ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ ನಾವು ಸೂಕ್ತವಾದ ಉತ್ತರವನ್ನು ನೀಡುತ್ತೇವೆ” ಎಂದು ಕಾನೂನು, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಪಾಕಿಸ್ಥಾನದ ಬಾಲಕೋಟ್ನಲ್ಲಿನ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಶಿಬಿರದ ಮೇಲೆ ಬಾಂಬ್ ಸ್ಫೋಟಿಸಿದ್ದನ್ನು ಭಾರತ ಏರ್ಸ್ಟ್ರೈಕ್ ಎಂದು ಕರೆದಿತ್ತು. ಅದಕ್ಕೂ ಮುನ್ನ ಪಾಕ್ ಉಗ್ರರ ವಿರುದ್ಧ ನಡೆಸಿದ ದಾಳಿಯನ್ನು ಭಾರತ ಸರ್ಜಿಕಲ್ ಸ್ಟ್ರೈಕ್ ಎಂದು ಹೆಸರಿಸಿತ್ತು. ಇದೀಗ ಚೀನಾ ಆ್ಯಪ್ಗಳ ನಿಷೇಧವನ್ನು ಭಾರತ ʼಡಿಜಿಟಲ್ ಸ್ಟ್ರೈಕ್ ಎಂದುʼ ಸಂಬೋಧಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಸೋಶೀಯಲ್ ಮೀಡಿಯಾದಿಂದಲೂ ಹೊರ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.