ನವದೆಹಲಿ: ಪ್ರಯಾಣಿಕ ರೈಲುಗಳನ್ನು ಓಡಿಸಲು ಖಾಸಗಿ ಸಂಸ್ಥೆಗಳಿಗೂ ಅವಕಾಶ ನೀಡಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
ವಿಶ್ವ ದರ್ಜೆಯ ರೈಲು ಸೇವೆಗಳನ್ನು ಒದಗಿಸುವ ಬೃಹತ್ ನಿರ್ಧಾರವಾಗಿ, ಭಾರತೀಯ ರೈಲ್ವೆ 109 ಮೂಲ ಗಮ್ಯಸ್ಥಾನ ಜೋಡಿ ಮಾರ್ಗಗಳಲ್ಲಿ ರೈಲುಗಳನ್ನು ಓಡಿಸಲು ಖಾಸಗಿ ಭಾಗವಹಿಸುವಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 151 ಆಧುನಿಕ ರೈಲು ರೇಕ್ಗಳನ್ನು ಪರಿಚಯಿಸುವ ಮೂಲಕ ಇದನ್ನು ಮಾಡಲಾಗುತ್ತಿದೆ, ಇದಕ್ಕಾಗಿ ರೈಲ್ವೆ ಅರ್ಹತೆಗಾಗಿ ಕೋರಿಕೆಯನ್ನು ಆಹ್ವಾನಿಸಿದೆ. ಈ ಯೋಜನೆಯು ಖಾಸಗಿ ವಲಯದ 30,000 ಕೋಟಿ ರೂಪಾಯಿ ಹೂಡಿಕೆಯನ್ನು ಕಾಣಲಿದೆ.
ಈ ಯೋಜನೆಗಾಗ ಖಾಸಗಿ ಸಂಸ್ಥೆಗಳಿಗೆ ಸ್ಟೇಟ್ ಟ್ರಾನ್ಸ್ಪೋರ್ಟ್ ಫ್ಲಾಟಿಂಗ್ ಅಡಿಯಲ್ಲಿ 30,000 ಕೋಟಿ ರೂ. ಗಳ ಹೂಡಿಕೆಗೂ ಅವಕಾಶ ನೀಡಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕಿಕ್ ಸ್ಟಾರ್ಟ್ ಪ್ರಕ್ರಿಯಯಂತೆ ಖಾಸಗಿ ಕಂಪನಿಗಳ ಅರ್ಹತೆಯನ್ನು ತಿಳಿದುಕೊಂಡು ಅವುಗಳಿಗೆ ರೈಲು ಓಡಿಸಲು ಅನುಮತಿ ನೀಡುವುದಾಗಿ ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಈ ಮಹತ್ವದ ಯೋಜನೆಯು ದೇಶದ ಬೇರೆ ಬೇರೆ ಭಾಗಗಳ ಸುಮಾರು 109 ಮಾರ್ಗಗಳಲ್ಲಿ 151 ರಷ್ಟು ಖಾಸಗಿ ಸಂಸ್ಥೆಗಳಿಗೆ ಪ್ಯಾಸೆಂಜರ್ ರೈಲುಗಳನ್ನು ಓಡಿಸುವ ಅವಕಾಶವನ್ನು ನೀಡಲಿದೆ. ಅಲ್ಲದೆ ಅತ್ಯಾಧುನಿಕ ರೈಲ್ವೆ ತಂತ್ರಜ್ಞಾನಗಳ ಬಗೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿಯೂ ಈ ಉಪಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.