ನವದೆಹಲಿ: ಭಾರತದ ಮಾಜಿ ಅಟಾರ್ನಿ ಜನರಲ್ (ಎಜಿ) ಮುಕುಲ್ ರೋಹ್ಟಗಿ ಅವರು ಚೀನಾದ ವಿಡೀಯೋ ಶೇರಿಂಗ್ ಅಪ್ಲಿಕೇಶನ್ ಟಿಕ್ಟಾಕ್ ಅನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ನಿರಾಕರಿಸಿದ್ದಾರೆ. ಗಡಿಯಲ್ಲಿ ಭಾರತದೊಂದಿಗೆ ಸಂಘರ್ಷ ನಡೆಸುತ್ತಿರುವ ಚೀನಾಗೆ ಸೂಕ್ತ ಪ್ರತ್ಯುತ್ತರ ನೀಡುವ ಸಲುವಾಗಿ ಭಾರತ ಸರ್ಕಾರವು ಚೀನಾದ 59 ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ.
ವರದಿಗಳ ಪ್ರಕಾರ, ತಾನು ಚೀನಾದ ಕಂಪನಿಯನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವುದಿಲ್ಲ ಮತ್ತು ಭಾರತ ಸರ್ಕಾರವು ವಿಧಿಸಿರುವ ನಿಷೇಧವನ್ನು ಪ್ರಶ್ನಿಸುವುದಿಲ್ಲ ಎಂದು ರೋಹ್ಟಗಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಹಿರಿಯ ಸುಪ್ರೀಂ ಕೋರ್ಟ್ ವಕೀಲರು ಆಗಿರುವ ಇವರು, “ನ್ಯಾಯಾಲಯದಲ್ಲಿ ಟಿಕ್ ಟಾಕ್ ಅನ್ನು ಪ್ರತಿನಿಧಿಸಲು ನಾನು ಸಿದ್ಧನಿಲ್ಲ, ನಾನು ಚೀನಾದ ಕಂಪನಿಯೊಂದರ ಪರವಾಗಿ ವಾಕಲತ್ತು ಮಾಡಲು ಬಯಸುವುದಿಲ್ಲ ಮತ್ತು ಇಂತಹ ಉದ್ವಿಗ್ನ ಸಮಯದಲ್ಲಿ ಸರ್ಕಾರದ ವಿರುದ್ಧ ವಾದಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ ಚೀನಾದ 59 ಅಪ್ಲಿಕೇಶನ್ಗಳನ್ನು ಭಾರತವು ಜೂನ್ 29 ರಂದು ನಿಷೇಧಿಸಿದೆ, ಇವುಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳಲ್ಲಿ ನಿರತವಾಗಿದೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದೆ ಎಂದು ಸರ್ಕಾರ ಆಪಾದಿಸಿದೆ.
ನಿಷೇಧಿಸಲಾದ ಅಪ್ಲಿಕೇಶನ್ಗಳ ಪಟ್ಟಿಯಲ್ಲಿ ಹೆಲೋ, ಲೈಕ್, ಕ್ಯಾಮ್ ಸ್ಕ್ಯಾನರ್, SHAREit, WeChat, Vigo Video, Mi Video Call – Xiaomi, Clash of Kings ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಾದ ಕ್ಲಬ್ ಫ್ಯಾಕ್ಟರಿ ಮತ್ತು ಶೀನ್ ಕೂಡ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.