ನವದೆಹಲಿ: ಕಾಶ್ಮೀರದಲ್ಲಿ ಹತ್ಯೆಗೀಡಾಗಿರುವ ಭಯೋತ್ಪಾದಕನ ತಾಯಿಯನ್ನು ಕೂಡ ಭಯೋತ್ಪಾದನೆಯ ಆರೋಪದ ಮೇರೆಗೆ ಬಂಧನಕ್ಕೆ ಒಳಪಡಿಸಲಾಗಿದೆ. ಬಂದೂಕು ಹಿಡಿದುಕೊಂಡು ಪೋಸ್ ನೀಡಿದ್ದಕ್ಕಾಗಿ ಮತ್ತು ಭಯೋತ್ಪಾದಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಯುಎಪಿಎ ಅಡಿಯಲ್ಲಿ ಈಕೆಯನ್ನು ಬಂಧಿಸಲಾಗಿದೆ.
ಪೊಲೀಸ್ ಹೇಳಿಕೆಯ ಪ್ರಕಾರ, ಹತ್ಯೆಗೀಡಾಗಿರುವ ಭಯೋತ್ಪಾದಕ ತೌಸೀಫ್ ತಾಯಿ ನಸೀಮಾ ಭಾನೂ ಅನ್ನು ಜೂನ್ 20 ರಂದು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಕಾನೂನಿನ ನಿಬಂಧನೆಗಳಿಗೆ ಅನುಸಾರವಾಗಿ ಈ ಬಂಧನ ಮಾಡಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಮತ್ತು ಆಕೆ ಬಂಧನವಾದಾಗಿನಿಂದ ಅನಂತ್ನಾಗ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇದ್ದಾಳೆ.
ಈಕೆಯು ಗಂಭೀರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಂಧಿತ ಮಹಿಳೆಯು ಫೋಟೋವೊಂದರಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡಿದ್ದಾಳೆ ಮತ್ತು ಈ ಹಿಂದೆ ಸಕ್ರಿಯ ಉಗ್ರನಾಗಿದ್ದ ಆಕೆಯ ಮಗ ಆಕೆಯ ಪಕ್ಕದಲ್ಲಿ ಗನ್ ಹಿಡಿದು ಪೋಸ್ ನೀಡಿದ್ದಾನೆ. ಈ ಫೋಟೋ ಆಕೆ ಭಯೋತ್ಪಾದನೆಯ ಸಂಪರ್ಕ ಹೊಂದಿದ್ದಾಳೆ ಎಂಬುದನ್ನು ಪುಷ್ಟೀಕರಿಸುತ್ತದೆ.
“ಆಕೆ ಹೆಚ್ಚು ಗಂಭೀರವಾದ ಅಪರಾಧಗಳಲ್ಲಿ ಭಾಗಿಯಾಗಿದ್ದಾಳೆ ಮತ್ತು ಕನಿಷ್ಠ ಇಬ್ಬರು ಯುವಕರನ್ನು ಉಗ್ರಗಾಮಿ ಶ್ರೇಣಿಗೆ ಸೇರಿಸಿಕೊಂಡ ಆರೋಪ ಇವಳ ಮೇಲಿದೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವ್ಯವಸ್ಥೆ ಮಾಡುವುದು, ಉಗ್ರರು ಮತ್ತು ಭಯೋತ್ಪಾದಕ ಸಂಘಟನೆಗಳ ಸಂವಹನ ಮತ್ತು ಸರಕು ವ್ಯವಸ್ಥೆಯಲ್ಲಿ ಆಕೆಯ ಪಾತ್ರವು ಕಾಣಿಸಿಕೊಂಡಿದೆ” ಎಂದು ಹೇಳಿಕೆ ತಿಳಿಸಿದೆ.
“ಸಾಕ್ಷ್ಯಾಧಾರಗಳಿಲ್ಲದೆ ಜಮ್ಮು-ಕಾಶ್ಮೀರ ಪೊಲೀಸರು ಭಯೋತ್ಪಾದಕರ ಕುಟುಂಬವನ್ನು ಗುರಿಯಾಗಿಸುವುದಿಲ್ಲ. ಸಕ್ರಿಯ ಭಯೋತ್ಪಾದಕ ಅಬ್ಬಾಸ್ ಶೇಖ್ ಮತ್ತು ಹತ್ಯೆಗೀಡಾದ ಭಯೋತ್ಪಾದಕ ತೌಸಿಫ್ ತಾಯಿ ನಸೀಮಾ ಭಾನು ಅವರನ್ನು 2020 ರ ಜೂನ್ 20ರಂದು ಬಂಧಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಯುವಕರನ್ನು ಭಯೋತ್ಪಾದಕ ಶ್ರೇಣಿಗೆ ಸೇರಿಸಿಕೊಳ್ಳುವಲ್ಲಿ ಈಕೆ ತೊಡಗಿಸಿಕೊಂಡಿದ್ದಾಳೆ “ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
Mother of killed terrorist Tausif has been arrested by Jammu & Kashmir Police for being part of terror recruitment ring & several other terror related crimes. Naseema Bano is also sister of active terrorist Abbas Sheikh. Why should she be immune to arrest? Good job by J&K Police. pic.twitter.com/5kieYSMSO7
— Aditya Raj Kaul (@AdityaRajKaul) June 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.