ನವದೆಹಲಿ: ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ)ಯು ಅಂತರರಾಷ್ಟ್ರೀಯ ಕಟ್ಟುಪಾಡುಗಳ ಉಲ್ಲಂಘನೆ ಮತ್ತು ತನ್ನ ನಾಗರಿಕರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆಯ ತಜ್ಞರು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಹೈ ಕಮಿಷನರ್ನ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ (ಒಎಚ್ಸಿಎಚ್ಆರ್) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮಾನವ ಹಕ್ಕುಗಳ ಪರಿಷತ್ತಿನ ವಿಶೇಷ ಕಾರ್ಯವಿಧಾನಗಳ ಭಾಗವಾಗಿರುವ ತಜ್ಞರು, ಚೀನಾದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಹೊಸ ಗಮನ ಹರಿಸುವ ಸಮಯ ಬಂದಿದೆ ಎಂದು ಹೇಳಿದರು. ವಿಶೇಷವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶ (ಎಸ್ಎಆರ್), ಕ್ಸಿನ್ಜಿಯಾಂಗ್ ಸ್ವಾಯತ್ತ ಪ್ರದೇಶದ ಅಲ್ಪಸಂಖ್ಯಾತರು, ಟಿಬೆಟ್ ಸ್ವಾಯತ್ತ ಪ್ರದೇಶದ ಜನರು ಮತ್ತು ಚೀನಾ ದೇಶಾದ್ಯಂತದ ಮಾನವ ಹಕ್ಕುಗಳ ರಕ್ಷಕರ ವಿರುದ್ಧದ ಕ್ರಮಗಳ ಹಿನ್ನೆಯಲ್ಲಿ ಇದು ಅತ್ಯಗತ್ಯವಾಗಿದೆ ಎಂದಿದ್ದಾರೆ.
ಚೀನಾದ ಮಾನವ ಹಕ್ಕುಗಳ ನಡವಳಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಯುಎನ್ ಮಾನವ ಹಕ್ಕುಗಳ ಮಂಡಳಿ (ಎಚ್ಆರ್ಸಿ) ತುರ್ತು ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸಿದೆ.
ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಾ ಬರುತ್ತಿದೆ ಎಂಬ ಆರೋಪಗಳು ಕೇಳುತ್ತಲೇ ಬರುತ್ತಿವೆ. ಆದರೆ ಅಲ್ಲಿನ ಆಡಳಿತ ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.