ನವದೆಹಲಿ: ಕೊರೊವೈರಸ್ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಕೈಗೊಂಡ ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ಕ್ರಮಗಳಿಂದಾಗಿ ಕೋವಿಡ್-19 ಚೇತರಿಕೆ ಪ್ರಮಾಣವು ದೇಶದಲ್ಲಿ 58.24% ಕ್ಕೆ ಸುಧಾರಿಸಿದೆ ಎಂದು ಸರ್ಕಾರದ ಹೇಳಿಕೆ ಶುಕ್ರವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ, ಒಟ್ಟು 13,940 ಕೋವಿಡ್ -19 ರೋಗಿಗಳನ್ನು ಗುಣಪಡಿಸಲಾಗಿದ್ದು, ಇದರಿಂದ ಗುಣಮುಖರಾದ ಒಟ್ಟು ರೋಗಿಗಳ ಸಂಖ್ಯೆ 2,85,636 ಕ್ಕೆ ತಲುಪಿದೆ. ಇದರೊಂದಿಗೆ ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು 58.24% ಕ್ಕೆ ತಲುಪಿದೆ.
ಚೇತರಿಸಿಕೊಂಡ ಪ್ರಕರಣಗಳು ಸಕ್ರಿಯ ಪ್ರಕರಣಗಳನ್ನು 96,173 ಸಂಖ್ಯೆಯೊಂದಿಗೆ ಮೀರಿಸಿದೆ ಮತ್ತು ದೇಶದಲ್ಲಿ 1,89,463 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲಾ ಸಕ್ರಿಯ ಪ್ರಕರಣಗಳು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಗಳ ಜಾಲವನ್ನು ದೇಶಾದ್ಯಂತ ವಿಸ್ತರಿಸುತ್ತಿರುವ ಐಸಿಎಂಆರ್ ಕಳೆದ 24 ಗಂಟೆಗಳಲ್ಲಿ 11 ಹೊಸ ಪ್ರಯೋಗಾಲಯಗಳನ್ನು ಸೇರಿಸಿದೆ. ಭಾರತವು ಈಗ ಕೋವಿಡ್-19 ಗೆ ಮೀಸಲಾಗಿರುವ 1016 ರೋಗನಿರ್ಣಯ ಪ್ರಯೋಗಾಲಯಗಳನ್ನು ಹೊಂದಿದೆ. ಇದರಲ್ಲಿ 737 ಸರ್ಕಾರಿ ಮತ್ತು 279 ಖಾಸಗಿ ಪ್ರಯೋಗಾಲಯಗಳು.
ಕಳೆದ 24 ಗಂಟೆಗಳ ಅವಧಿಯಲ್ಲಿ, ಪ್ರಯೋಗಾಲಯಗಳಲ್ಲಿ 2,15,446 ಪರೀಕ್ಷೆಗಳನ್ನು ನಡೆಸಲಾಗಿದೆ. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 77,76,228.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.