ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಡುವ ಕೊರೋನಾ ವಾರಿಯರ್ಸ್ಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಆರೋಗ್ಯ ರಕ್ಷಕ ಪಿಪಿಇ ಕಿಟ್, ಸ್ಯಾನಿಟೈಸರ್ ಇತ್ಯಾದಿಗಳನ್ನು ತಯಾರಿಸುತ್ತಿದೆ.
ಈವರೆಗೆ ಸುಮಾರು 1.91 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್ಗಳು, 66.4 kl ಸ್ಯಾನಿಟೈಸರ್, 7.33 ಲಕ್ಷ ಗಳಷ್ಟು ಮಾಸ್ಕ್ಗಳನ್ನು ತಯಾರಿಸುವ ಮೂಲಕ ಸಾಧನೆ ಮಾಡಿದೆ. ಕೊರೋನಾ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಆರೋಗ್ಯ ರಕ್ಷಣಾ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ತಯಾರಿಸಿದೆ. ಆ ಮೂಲಕ ಸಾಂಕ್ರಾಮಿಕ ರೋಗ ಕೋವಿಡ್-19 ಅನ್ನು ಎದುರಿಸಲು ಬೇಕಾದ ವ್ಯವಸ್ಥೆ ಮಾಡುತ್ತಿದೆ.
ಜೂನ್ ಮತ್ತು ಜುಲೈನಲ್ಲಿ ಸುಮಾರು 15 ಲಕ್ಷದಷ್ಟು ಪಿಪಿಇ ಕಿಟ್ಗಳನ್ನು ತಯಾರಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದ್ದು, ಅದಕ್ಕಾಗಿ ಬೇಕಾದ ಕಚ್ಛಾವಸ್ತುಗಳನ್ನು ಸಂಗ್ರಹ ಮಾಡುವತ್ತ ಚಿತ್ತ ಹರಿಸಿದೆ. ಈ ಗುರಿಯನ್ನು ಮೀರುವ ಮೂಲಕ 15 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್ಗಳನ್ನು ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿಯೂ ಇಲಾಖೆ ತಿಳಿಸಿದೆ. ಹೀಗೆ ತಯಾರಿಸಲ್ಪಟ್ಟ ವಸ್ತುಗಳ ಸುರಕ್ಷತೆಯ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಲಾಗುತ್ತಿದ್ದ, ಸೂಕ್ತ ಪರೀಕ್ಷೆ ನಡೆಸಿದ ಬಳಿಕವೇ ಖರೀದಿ ಮತ್ತು ವಿತರಣೆ ಕಾರ್ಯ ನಡೆಸಲಾಗುವುದಾಗಿಯೂ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಗುಣಮಟ್ಟಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾನದಂಡಗಳನ್ನು ಅನುಸರಿಸಿಕೊಂಡೇ ರಕ್ಷಣಾ ಕವಚಗಳ ಕಿಟ್ಗಳನ್ನು ಸಿದ್ಧ ಮಾಡುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ರೈಲ್ವೆ ಘಟಕಗಳ ಅನುಕೂಲತೆಗಾಗಿ 22 ಲಕ್ಷ ಪಿಪಿಇ ಕವರ್, 22.5 ಲಕ್ಷಗಳಷ್ಟು ಎನ್ 95 ಮಾಸ್ಕ್, 500 ಲೀ. ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಉತ್ತರ ರೈಲ್ವೆ ಎಚ್ ಎಲ್ ಎಲ್ ಲೈಫ್ ಕೇರ್ನಲ್ಲಿ ತಯಾರಿಸಿರುವುದಾಗಿಯೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೆಯಾಗಿ ಕೊರೋನಾ ಸೋಂಕಿನಿಂದ ಆರೋಗ್ಯ ಕಾರ್ಯಕರ್ತರ ಜೀವ ರಕ್ಷಿಸುವ ಸಲುವಾಗಿ ಸರ್ಕಾರಗಳ ಜೊತೆಗೆ ಭಾರತೀಯ ರೈಲ್ವೆ ಇಲಾಖೆಯೂ ಕೈ ಜೋಡಿಸಿ ದೇಶಸೇವೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.