ನವದೆಹಲಿ: ಭಾರತದ ಅತಿ ಕಿರಿಯ ಬರಹಗಾರ 15 ವರ್ಷದ ಯಶ್ವರ್ಧನ್ ಶುಕ್ಲಾ ಮತ್ತೊಂದು ಕಾದಂಬರಿ ಬರೆಯಲು ಆರಂಭಿಸಿದ್ದಾರೆ. ‘A Space Oddyssey’ ಎಂಬುದು ಅವರ ಈ ಬಾರಿಯ ಕಾದಂಬರಿಯಾಗಿದ್ದು, ಇದು ಅವರ ‘ದಿ ಗಾಡ್ಸ್ ಆಫ್ ಅಂಟಾರ್ಟಿಕ’ದ ಮುಂದುವರೆದ ಭಾಗವಾಗಿದೆ.
ದೆಹಲಿ ಮೂಲದ ಶುಕ್ಲಾ ತಮ್ಮ ಮೊದಲ ಕಾದಂಬರಿ ‘ದಿ ಗಾಡ್ಸ್ ಆಫ್ ಅಂಟಾರ್ಟಿಕ’ದ ಮೂಲಕ ಬರಹಗಾರನಾಗಿ ಹೊರಹೊಮ್ಮಿದರು. ದೇವರು ಮತ್ತು ರಾಕ್ಷಸರ ನಡುವಿನ ಕಾಲ್ಪನಿಕ ಕಥೆಯನ್ನು ಇದು ಒಳಗೊಂಡಿದೆ. ಇದು ಅದ್ಭುತವಾಗಿ ಮಾರಾಟಗೊಂಡು, ಮರು ಮುದ್ರಿತವಾಗಿತ್ತು. 2015ರ ಫೆಬ್ರವರಿಯಲ್ಲಿ ಕೇಂದ್ರ ಸಚಿವ ಡಾ.ಶೈಲೇಶ್ ನಾಯಕ್ ಇದನ್ನು ಲೋಕಾರ್ಪಣೆ ಮಾಡಿದ್ದರು.
ಇದೀಗ ಆ ಕಾದಂಬರಿಯ ಮುಂದುವರೆದ ಭಾಗವನ್ನು ಅವರು ಬರೆಯುತ್ತಿದ್ದು, ಅದಕ್ಕೆ ‘A Space Oddyssey’ ಎಂಬ ಹೆಸರಿಟ್ಟಿದ್ದಾರೆ. ಶೀಘ್ರದಲ್ಲೇ ಆ ಕಾದಂಬರಿ ಲೋಕಾರ್ಪಣೆಗೊಳ್ಳಲಿದೆ.
ಬಾಲ ಬರಗಹಾರನಾಗಿರುವ ಶುಕ್ಲಾ ಅವರಿಗೆ ಹ್ಯಾರಿ ಪಾಟರ್ನಿಂದ ಸ್ಫೂರ್ತಿ ಪಡೆದಿದ್ದಾನೆ. ಜೆಕೆ.ರೌಲಿಂಗ್, ಅಮಿತ್ ತ್ರಿಪಾಠಿ ಈತನ ನೆಚ್ಚಿನ ಬರಹಗಾರರು. ತನ್ನ ಮೊದಲ ಕೃತಿಯಿಂದಲೇ ಈತ ದೇಶದ ದೊಡ್ಡ ಬರಹಗಾರನಾಗಿ ರೂಪುಗೊಳ್ಳುವ ಭರವಸೆಯನ್ನು ಹುಟ್ಟಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.