ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕೊರೋನಾಗಾಗಿ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಹೆಚ್ಚಳಗೊಳಿಸಬೇಕಾದ ಮಹತ್ತರವಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ದೇಶದಲ್ಲಿನ ಲ್ಯಾಬ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ.
ಇದೀಗ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಭಾರತದ ಮೊದಲ ಸಂಚಾರಿ (ಮೊಬೈಲ್) ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಅನ್ನು ಉದ್ಘಾಟನೆಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗ್ರಾಮೀಣ ಭಾರತಕ್ಕೂ ಟೆಸ್ಟಿಂಗ್ ಲ್ಯಾಬ್ ಲಭ್ಯಗೊಳಿಸುವ ಸಲುವಾಗಿ ಈ ಮೊಬೈಲ್ ಲ್ಯಾಬ್ ಅನ್ನು ತರಲಾಗಿದೆ. ದೇಶದ ದೂರಸ್ಥ ಪ್ರದೇಶಗಳಲ್ಲಿ ಇವುಗಳನ್ನು ನಿಯೋಜನೆಗೊಳಿಸುವ ನಿರ್ಧಾರ ಮಾಡಲಾಗಿದೆ.
ಇನ್ಫೆಕ್ಟೆಶಿಯಸ್ ಡಿಸೀಸ್ ಡಿಯಾಗ್ ಲ್ಯಾಬ್(I-LAB) ಅನ್ನು ಕೋವಿಡ್ ಕಮಾಂಡ್ ತಂತ್ರದಡಿಯಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆ ಬೆಂಬಲಿಸುತ್ತದೆ. ಈ ಮೊಬೈಲ್ ಲ್ಯಾಬ್ ಅನ್ನು ದೇಶದ ದೂರಸ್ಥ, ಪ್ರವೇಶಿಸಲಾಗದ ಭಾಗಗಳಲ್ಲಿ ನಿಯೋಜಿಸಲಾಗುತ್ತದೆ. ಐ-ಲ್ಯಾಬ್ ದಿನಕ್ಕೆ 25 RT-PCR ಮತ್ತು 300 ELISA ಪರೀಕ್ಷೆಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.