ಡೆಹ್ರಾಡೂನ್: 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 94ರಷ್ಟು ಅಂಕ ಪಡೆದ ಬಾಲಕಿಯೊಬ್ಬಳು ಒಂದು ದಿನದ ಮಟ್ಟಿಗೆ ಹಿಮಾಚಲಪ್ರದೇಶದ ಕಾಂಗ್ರಾದ ಸಬ್-ಡಿವಿಶನಲ್ ಮ್ಯಾಜಿಸ್ಟ್ರೇಟ್ ಆಗಿ ಶುಕ್ರವಾರ ಅಧಿಕಾರ ನಡೆಸಿದಳು.
ವಿಶೇಷವೆಂದರೆ, ಬಾಲಕಿ ಹೀನಾ ಠಾಕೂರ್ ತಂದೆ ಸಬ್-ಡಿವಿಶನಲ್ ಮ್ಯಾಜಿಸ್ಟ್ರೇಟ್ ಕಛೇರಿಯಲ್ಲಿ ಪಿಯೋನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
2016ನೇ ಬ್ಯಾಚ್ನ ಸಬ್-ಡಿವಿಶನ್ ಮ್ಯಾಜಿಸ್ಟ್ರೇಟ್ ಆಗಿರುವ ಜತಿನ್ ಲಾಲ್ ಅವರು, ಹೀನಾ ಶೇಕಡಾ 94ರಷ್ಟು ಅಂಕ ಪಡೆದ ಬಳಿಕ ಆಕೆಯನ್ನು ಒಂದು ದಿನದ ಮಟ್ಟಿಗೆ ಸಬ್-ಡಿವಿಶನಲ್ ಮ್ಯಾಜಿಸ್ಟ್ರೇಟ್ ಮಾಡಳು ನಿರ್ಧರಿಸಿದರು. ಆಕೆಯನ್ನು ತಮ್ಮ ಸ್ಥಾನದಲ್ಲಿ ಕೂರಿಸಿದ ಲಾಲ್ ತಾವು ಆಕೆಯ ಪಕ್ಕದಲ್ಲಿ ಕೂತರು.
ಎಸ್ಡಿಎಂ ಆದ ಹೀನಾ, ಎಸ್ಡಿಎಂ ಲಾಲ್ ಅವರ ಮಾರ್ಗದರ್ಶನದಲ್ಲಿ ಕಚೇರಿ ಸಭೆಗಳನ್ನು ನಡೆಸಿದಳು. ಎಸ್ಡಿಎಂ ಭೇಟಿಯಾಗಲು ಆಗಮಿಸಿದ ಸಂದರ್ಶಕರು ತಮ್ಮ ಸಮಸ್ಯೆಗಳನ್ನು ಅವಳಿಗೆ ವಿವರಿಸಿದರು.
ಈ ಅನುಭವವು ನನಗೆ ಒಂದು ಕನಸು ನನಸಾದ ಅನುಭವ ನೀಡಿದೆ ಎಂದು ಹೀನಾ ಹೇಳಿದ್ದಾಳೆ.
“ಎಸ್ಡಿಎಂ ಜತಿನ್ ಲಾಲ್ ಸರ್ ನನಗೆ ಕನಸನ್ನು ತೋರಿಸಿದ್ದಾರೆ, ನಾನು ಅದನ್ನು ಪೂರೈಸುತ್ತೇನೆ. ನಾನು ಮೊದಲು ವೈದ್ಯಳಾಗುತ್ತೇನೆ ಮತ್ತು ನಂತರ ಐಎಎಸ್ ಅಧಿಕಾರಿಯಾಗುತ್ತೇನೆ”ಎಂದು ಹೀನಾ ಹೇಳಿದಳು.
“ಉತ್ತಮ ಅಂಕ ಪಡೆದ ಕಾರಣಕ್ಕಾಗಿ ಗೌರವಿಸುವ ಸಲುವಾಗಿ ನಾನು ಹೀನಾಳನ್ನು ಕಚೇರಿಗೆ ಕರೆದೆ. ಅವಳು ಐಎಎಸ್ ಅಧಿಕಾರಿಯಾಗಲು ಬಯಸಿದ್ದಾಳೆ ಎಂದು ನನಗೆ ಹೇಳಿದಳು, ಹೀಗಾಗಿ ನಾನು ಅವಳನ್ನು ಎಸ್ಡಿಎಂ ಆಗಿ ಒಂದು ದಿನ ನೇಮಕ ಮಾಡಲು ನಿರ್ಧರಿಸಿದೆ. ಇಂದು ಹೀನಾ ಎಸ್ಡಿಎಂ ಆಗಿದ್ದು, ಆಕೆ ಎಲ್ಲಾ ಕೆಲಸಗಳನ್ನು ನೋಡಿಕೊಂಡಿದ್ದಾಳೆ ”ಎಂದು ಲಾಲ್ ಹೇಳಿದರು.
“ನಾನು ಅವಳ ಪಕ್ಕದಲ್ಲಿ ಕುಳಿತು ಅವಳಿಗೆ ಸಹಾಯ ಮಾಡಿದೆ. ಬೇಟಿ ಪಡಾವೊ, ಬೇಟಿ ಬಚಾವೊ ಅಭಿಯಾನವನ್ನು ಉತ್ತೇಜಿಸುವುದು ನನ್ನ ಉದ್ದೇಶವಾಗಿತ್ತು, ಇದರಿಂದ ಪ್ರತಿಯೊಬ್ಬ ಮಗಳಿಗೂ ಗೌರವ ಸಿಕ್ಕಿದಂತೆ ಆಗುತ್ತದೆ”ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.