ನವದೆಹಲಿ: ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿರುವ ಎರಡು ವಿಶೇಷವಾಗಿ ಮಾರ್ಪಡಿಸಿದ ಬೋಯಿಂಗ್ -777 ವಿಮಾನಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಏರ್ ಇಂಡಿಯಾ ಒನ್ ಫ್ಲೀಟ್ಗೆ ಸೇರಲಿವೆ ಎಂದು ಬುಧವಾರ ವರದಿಗಳು ತಿಳಿಸಿವೆ.
ಆಗಸ್ಟ್ ಅಂತ್ಯದ ವೇಳೆಗೆ ಮೊದಲ ಹೆಡ್-ಆಫ್-ಸ್ಟೇಟ್ ಬೋಯಿಂಗ್ -777 ವಿಮಾನವು ಯುನೈಟೆಡ್ ಸ್ಟೇಟ್ಸ್ನಿಂದ ಭಾರತಕ್ಕೆ ಆಗಮಿಸಲಿದ್ದು, ಎರಡನೇಯದು ಒಂದು ತಿಂಗಳ ನಂತರ ಆಗಮಿಸಲಿದೆ ಎಂದು ಹೇಳಲಾಗಿದೆ.
ಈ ವಿಮಾನಗಳು ಇನ್ಫ್ರಾರೆಡ್ ಕೌಂಟರ್ಮೆಝರ್ಸ್, ಸುಧಾರಿತ ಇಂಟಿಗ್ರೇಟೆಡ್ ಡಿಫೆನ್ಸಿವ್ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಮತ್ತು ಒಳಬರುವ ಕ್ಷಿಪಣಿಗಳಿಂದ ರಕ್ಷಿಸಲು ಕೌಂಟರ್ ಮೆಸರ್ಸ್ ಡಿಸ್ಪೆನ್ಸಿಂಗ್ ವ್ಯವಸ್ಥೆಯನ್ನು ಒಳಗೊಂಡಿರುವ ಸ್ವಯಂ-ರಕ್ಷಣಾ ಸೂಟ್ಗಳನ್ನು (ಎಸ್ಪಿಎಸ್) ಹೊಂದಿರಲಿವೆ.
ಸುರಕ್ಷತಾ ಕ್ರಮಗಳಲ್ಲಿ ಈ ವಿಮಾನವು ಅಮೆರಿಕಾ ಅಧ್ಯಕ್ಷರ ಏರ್ಫೋರ್ಸ್ ಒನ್ಗೆ ಸರಿಸಮಾನವಾಗಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿ ಸ್ಥಳಗಳು, ಸಭೆಯ ಕೊಠಡಿಗಳು, ವ್ಯಾಪಕವಾದ ಸಂವಹನ ವ್ಯವಸ್ಥೆಗಳು ಮತ್ತು ವೈದ್ಯಕೀಯ ತುರ್ತುಸ್ಥಿತಿಗಳನ್ನು ನಿಭಾಯಿಸಲು ಒಂದು ವಿಭಾಗವು ಪ್ರಧಾನಿಗಾಗಿ ವಿಮಾನದಲ್ಲಿ ಇರಲಿದೆ. ವಿಮಾನವು ಇಂಧನ ತುಂಬಲು ನಿಲ್ಲಿಸದೆಯೇ ಯುಎಸ್ ಮತ್ತು ಭಾರತದ ನಡುವೆ ಹಾರಬಲ್ಲದು ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡ ಮಟ್ಟದ ಜೀವ ಬೆದರಿಕೆಗಳು ಇವೆ. ಈ ಹಿನ್ನಲೆಯಲ್ಲಿ ಅವರಿಗೆ ಸುಸಜ್ಜಿತ ಮತ್ತು ಎಲ್ಲಾ ಬೆದರಿಕೆಗಳನ್ನು ನಿಭಾಯಿಸಬಲ್ಲ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.