ಭುವನೇಶ್ವರ: ಮರಳು ಕಲಾವಿದ ಸುಬಲ್ ಮೊಹರಾನ ಅವರು ವಿಶ್ವದ ಅತೀ ಚಿಕ್ಕ ಶ್ರೀ ಜಗನ್ನಾಥನ ರಥವನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ವಿಶ್ವ ದಾಖಲೆಯ ಗಿನ್ನಿಸ್ ಬುಕ್ಗೆ ಅರ್ಜಿ ಹಾಕಿದ್ದಾರೆ.
ಪುರಿಯಲ್ಲಿ ನಡೆಯುವ ರಥೋತ್ಸವಕ್ಕೂ ಮುನ್ನ ಭುವನೇಶ್ವರದ ಖ್ಯಾತ ಮರಳು ಕಲಾವಿದ ಸುಬಾಲ್ ಮೊಹರಾನ ಅವರು ಭಗವಾನ್ ಜಗನ್ನಾಥನ ಅತಿ ಚಿಕ್ಕ ರಥವನ್ನು ಮಾಡಿದ್ದಾರೆ. ರಥದ ಎತ್ತರವು 2.3 ಮಿ.ಮೀ ಮತ್ತು ಅದರ ಅಗಲ 1.9 ಮಿ.ಮೀ ಇದೆ. ಮರದ ತುಂಡುಗಳು, ಬಟ್ಟೆ ಮತ್ತು ಬಟ್ಟೆಯ ಬಣ್ಣಗಳನ್ನು ಬಳಸಿ ರಥವನ್ನು ತಯಾರಿಸಲಾಗಿದೆ. ಇದನ್ನು ಎರಡು ಗಿಳಿಗಳಿಂದ ಅಲಂಕರಿಸಲಾಗಿದೆ, ಮೂಲ ರಥದಲ್ಲಿ ಇರುವಂತೆ ದಾದಿನೌತಿ ಮತ್ತು ಪಟಿತಾಬಬನ್ ಧ್ವಜವನ್ನು ಇದರಲ್ಲಿ ಇಡಲಾಗಿದೆ.
ಸುಬಾಲ್ ಮೊಹರಾನ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಎಲ್ಲಾ ಮೂರು ತುಣುಕುಗಳನ್ನು ಪೂರ್ಣಗೊಳಿಸಲು ಸುಮಾರು 15 ಗಂಟೆ 20 ನಿಮಿಷಗಳನ್ನು ತೆಗೆದುಕೊಂಡಿದ್ದೇನೆ. ಕಳೆದ ವರ್ಷ, ಒಬ್ಬರು 2.5 ಮಿ.ಮೀ ಎತ್ತರದ ರಥವನ್ನು ಮಾಡಿದ್ದರು, ಆದ್ದರಿಂದ ನಾನು ಅದಕ್ಕಿಂತ ಒಂದು ಇಂಚು ಚಿಕ್ಕದಾಗಿ ಮಾಡಿದ್ದೇನೆ. ಇದಕ್ಕಿಂತ ಚಿಕ್ಕದಾದ ರಥ ಬೇರೆ ಇಲ್ಲ” ಎಂದಿದ್ದಾರೆ.
ಸುಬಲ್ ಮೊಹರಾನಾ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ಗೆ ಸಾಕ್ಷಿಗಳೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷ ಪುರಿ ರಥಯಾತ್ರೆ ಜೂನ್ 23 ರಂದು ಭಕ್ತರ ಭಾಗವಹಿಸುವಿಕೆ ಇಲ್ಲದೆ ನಡೆಯಲಿದೆ.
Odisha: Subal Moharana in Bhubaneswar created miniature versions of Nandighosa, Lord Jagannath’s chariot, Taladwaja, chariot of Lord Balabhadra&Darpadalana,chariot of Devi Subhadra. He says,”It took me 15 hours&they are smallest ever made, so applied for Guinness World Records”. pic.twitter.com/pRNbEg7Qmx
— ANI (@ANI) June 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.