ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಗಳಿಗೆ ಅತಿದೊಡ್ಡ ಮುನ್ನಡೆ ಸಿಕ್ಕಿದೆ. ಜೈಶೇ ಇ ಮೊಹಮ್ಮದ್ ಮಾದರಿಯ ಮತ್ತೊಂದು ಸಂಘಟನೆಯನ್ನು ಹೆಡೆಮುರಿ ಕಟ್ಟಲಾಗಿದೆ.
ಬುದ್ಗಾಂನಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಘಟನೆಯನ್ನು ಭದ್ರತಾಪಡೆಗಳು ಭೇದಿಸಿದ್ದು, ಇದಕ್ಕೆ ಸಂಬಂಧಿಸಿದ ಆರು ಮಂದಿ ಉಗ್ರರನ್ನು ಬಂಧನಕ್ಕೊಳಪಡಿಸಿದೆ.
ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸ್, ಸಿಆರ್ಪಿಎಫ್ ಮತ್ತು ಸೇನೆ ಜಂಟಿಯಾಗಿ ಕಾರ್ಯಾಚರಣೆ ಬುದ್ಗಾಂನ ಚದೂರದಲ್ಲಿ ಉಗ್ರರನ್ನು ಬಂಧಿಸಿದೆ.
ಅಪಾರ ಪ್ರಮಾಣದ ನಿಷೇಧಿತ ವಸ್ತುಗಳು, ಶಸ್ತ್ರಾಸ್ತ್ರಗಳನ್ನು, ಚೀನಾ ಪಿಸ್ತೂಲ್, ಹ್ಯಾಂಡ್ ಗ್ರೆನೇಡ್, 1 ಕೆಜಿ ನರ್ಕೋ ಹೆರಾಯಿನ್ ಅನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ.
ಈ ಉಗ್ರರಿಗೆ ಪಾಕಿಸ್ಥಾನ ಮೂಲದ ಉಗ್ರರೊಂದಿಗೆ ನಿಕಟ ಸಂಪರ್ಕವಿತ್ತು ಎಂದು ಭದ್ರತಾಪಡೆಗಳು ತಿಳಿಸಿವೆ. ಮಾದಕ ವಸ್ತುಗಳ ಸಾಗಣೆ, ಸಶಸ್ತ್ರಗಳ ಸಾಗಣೆಯಲ್ಲಿ, ಜೈಶ್-ಇ-ಮೊಹಮ್ಮದ್ಗೆ ಹಣಕಾಸು ಒದಗಿಸುವಲ್ಲಿ ಪೊಗರು ನಿರತರಾಗಿದ್ದರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.