ನವದೆಹಲಿ: ಭಾರತದ ಒಟ್ಟು COVID-19 ಪ್ರಕರಣಗಳು 1,65,799 ಕ್ಕೆ ಏರಿವೆ, ಇದರಲ್ಲಿ 89,987 ಸಕ್ರಿಯ ಪ್ರಕರಣಗಳು, 71,106 ಗುಣಪಡಿಸಿದ ಪ್ರಕರಣಗಳು ಮತ್ತು 4706 ಸಾವುಗಳು ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಈ ನಡುವೆ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈಗಳನ್ನು ಒಳಗೊಂಡ ದೇಶದ 13 ಹೆಚ್ಚು ನಗರಗಳ ಪುರಸಭೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಕೊರೋನಾ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದರು.
ದೇಶದ ವಿವಿಧ ಭಾಗಗಳಲ್ಲಿ ಇದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ತೆರಳಿರುವ ಹಿನ್ನೆಲೆಯಲ್ಲಿ, ಗ್ರಾಮೀಣ ಭಾರತ ಕೊರೋನವೈರಸ್ ಸಾಂಕ್ರಾಮಿಕದ ಹೊಸ ಹಾಟ್ ಸ್ಪಾಟ್ ಆಗುವ ಸಾಧ್ಯತೆಗಳು ಇವೆ ಎಂಬ ಆತಂಕ ಎದುರಾಗಿದೆ.
ಜಾಗತಿಕವಾಗಿ, ಕೊರೋನಾ ಸೋಂಕುಗಳು 58 ಲಕ್ಷ ದಾಟಿದೆ ಮತ್ತು ಸಾವಿನ ಸಂಖ್ಯೆ 3.6 ಲಕ್ಷಕ್ಕೆ ಹತ್ತಿರದಲ್ಲಿದೆ. ಮೇ 29 ರಂದು ಬೆಳಿಗ್ಗೆ 6.00 ರ ಹೊತ್ತಿಗೆ, ಒಟ್ಟು ಸೋಂಕುಗಳ ಸಂಖ್ಯೆ 58,03,416 ಆಗಿದ್ದರೆ, ಸಾವಿನ ಸಂಖ್ಯೆ 3,59,791 ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.