ಲಕ್ನೋ: ಭಾರತೀಯ ರೈಲ್ವೆಯ ಲಕ್ನೋ ಮೂಲದ ಸಂಶೋಧನಾ ವಿಭಾಗವಾದ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (ಆರ್ಡಿಎಸ್ಒ) ರೈಲ್ ಮಿಲ್ಕ್ ಟ್ಯಾಂಕ್ ವ್ಯಾನ್ ಅನ್ನು ಹೆಚ್ಚಿನ ಸಾಗಾಣೆ ಸಾಮರ್ಥ್ಯದೊಂದಿಗೆ ಅಭಿವೃದ್ಧಿಪಡಿಸಿದೆ, ಅದು 44,660 ಲೀಟರ್ ವರೆಗೆ ಹಾಲು ಸಾಗಿಸಬಲ್ಲದು ಎಂದು ವರದಿಗಳು ತಿಳಿಸಿವೆ.
ಮೇಲ್ / ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳೊಂದಿಗೆ ಜೋಡಿಸಿದ ನಂತರ ಈ ವ್ಯಾನ್ ಹಾಲಿನ ಸಾಗಣೆಗಾಗಿ 110 ಕಿ.ಮೀ ವೇಗದಲ್ಲಿ ಚಲಿಸಬಹುದು. ಇದು ಉತ್ಪಾದಕರು ಮತ್ತು ಪೂರೈಕೆದಾರರಿಂದ ಗ್ರಾಹಕರಿಗೆ ಹಾಲನ್ನು ವೇಗವಾಗಿ ಮತ್ತು ಆರ್ಥಿಕಅನುಕೂಲದೊಂದಿಗೆ ಸಾಗಿಸಲು ಅನುಕೂಲವಾಗಲಿದೆ.
110 ಕಿ.ಮೀ ವೇಗದಲ್ಲಿ ವ್ಯಾನ್ ಅನ್ನು ನಿಯಮಿತವಾಗಿ ಓಡಿಸಲು ಅನುಮೋದನೆ ಶೀಘ್ರದಲ್ಲೇ ಸಿಗಲಿದೆ.
ಹಾಲಿನ ಟ್ಯಾಂಕ್ನಲ್ಲಿ, ಸಾಗಣೆಯ ಸಮಯದಲ್ಲಿ ಹಾಲನ್ನು ತಣ್ಣಗಾಗಿಸಲು ಪಿಯುಎಫ್ ನಿರೋಧನದೊಂದಿಗೆ ವಿಶೇಷ ಸ್ಟೇನ್ಲೆಸ್ ಸ್ಟೀಲ್ ಡಬಲ್ ಬ್ಯಾರೆಲ್ ಶೆಲ್ ಅನ್ನು ಬಳಸಲಾಗುತ್ತದೆ. ಕೋವಿಡ್ -19 ಅವಧಿಯಲ್ಲಿ, ಹಾಲಿನ ಟ್ಯಾಂಕ್ ಹಾಲಿನ ಉದ್ಯಮಕ್ಕೆ ವರದಾನವೆಂದು ಸಾಬೀತುಪಡಿಸಬಹುದು. ಏಕೆಂದರೆ ಇದು ಹಾಲಿನ ಸುರಕ್ಷತೆ, ಆರ್ಥಿಕ ಮತ್ತು ತ್ವರಿತ ಸಾಗಣೆಗೆ ಸಹಾಯ ಮಾಡುತ್ತದೆ.
M / s RITES ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಇದು ಸ್ಥಳೀಯ ವಿನ್ಯಾಸವಾಗಿದ್ದು, ಸ್ಥಳೀಯ ಉದ್ಯಮದ ಸಹಾಯದಿಂದ ಇದರ ಉತ್ಪಾದನೆ ನಡೆಯುತ್ತಿದೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಟ್ವೀಟ್ ಮಾಡಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರೈಲ್ವೆ 44,660 ಲೀಟರ್ ಹಾಲನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ರೈಲ್ ಮಿಲ್ಕ್ ಟ್ಯಾಂಕ್ ವ್ಯಾನ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಹಿಂದಿನ ವ್ಯಾನ್ಗಿಂತ 12% ಹೆಚ್ಚು ಹಾಲು ಸಾಗಿಸಬಲ್ಲದು ಎಂದಿದ್ದಾರೆ.
ವಿಶೇಷ ಸ್ಟೇನ್ಲೆಸ್ ಸ್ಟೀಲ್ ಒಳಾಂಗಣದೊಂದಿಗೆ 110 ಕಿ.ಮೀ ವೇಗದಲ್ಲಿ ಚಲಿಸುವಂತೆ ಸ್ಥಳೀಯವಾಗಿ ವ್ಯಾನ್ ಅನ್ನು ತಯಾರಿಸಲಾಗಿದ್ದು, ವ್ಯಾನ್ ಸುರಕ್ಷಿತ, ಆರ್ಥಿಕ ಮತ್ತು ಹಾಲಿನ ತ್ವರಿತ ಸಾಗಣೆಗೆ ಅನುಕೂಲ ಮಾಡಿಕೊಡಲಿದೆ.
Railways has developed a Rail Milk Tank Van with a carrying capacity of 44,660 litres of milk, ~12% more than the earlier van.
Made indigenously to run up to 110 kmph with a special stainless steel interior, van will facilitate safe, economic & quick transportation of milk 🥛 pic.twitter.com/vdSMTn0GWx
— Piyush Goyal (@PiyushGoyal) May 25, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.