ನವದೆಹಲಿ: 200 ರೂಪಾಯಿ ಹಣ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಪೊಲೀಸರು ರಾಷ್ಟ್ರೀಯ ಮಟ್ಟದ ಫೆನ್ಸಿಂಗ್(ಕತ್ತಿ ವರಸೆ) ಚಾಂಪಿಯನ್ನನ್ನು ರೈಲಿನಿಂದ ಹೊರಕ್ಕೆ ದೂಡಿ ಆತನ ಸಾವಿಗೆ ಕಾರಣರಾಗಿದ್ದಾರೆ.
ಕ್ರೀಡಾಪಟು ಹೋಶಿಯಾರ್ ಸಿಂಗ್ ತಮ್ಮ ಕುಟುಂಬದೊಂದಿಗೆ ಕಾಸ್ಗಂಜ್-ಮಥುರಾ ಪ್ರಯಾಣಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳಾ ಬೋಗಿಯಲ್ಲಿ ಕೂತಿದ್ದ ಅಸೌಖ್ಯದಿಂದ ಬಳಲುತ್ತಿದ್ದ ತನ್ನ ಪತ್ನಿಯನ್ನು ನೋಡಲು ಹೋಶಿಯಾರ್ ಆಕೆಯಿದ್ದಲ್ಲಿಗೆ ತೆರಳಿದ್ದಾರೆ. ತಕ್ಷಣವೇ ರೈಲ್ವೇ ಪೊಲೀಸರು ಇವರನ್ನು ತಡೆದು ನಿಲ್ಲಿಸಿ 200 ರೂ. ಕೊಡುವಂತೆ ಸೂಚಿಸಿದ್ದಾರೆ. ಇದಕ್ಕೆ ಅವರು ನಿರಾಕರಿಸಿದ್ದಾರೆ. ಇದರಿಂದ ಕ್ರೋಧಿತರಾಗಿ ಪೊಲೀಸರು ಅವರನ್ನು ರೈಲಿನಿಂದ ಹೊರಕ್ಕೆ ದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೀಗ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಹೋಶಿಯಾರ್ ಕುಟುಂಬ ಆಗ್ರಹಿಸಿದೆ. ಆದರೆ ರೈಲ್ವೇ ಇಲಾಖೆ ಮಾತ್ರ ಹೋಶಿಯಾರ್ ಕಾಲು ಜಾರಿ ಕೆಳಗೆ ಬಿದ್ದು ಮೃತರಾಗಿದ್ದಾರೆ ಎಂದು ವಾದಿಸುತ್ತಿದೆ.
2005ರಲ್ಲಿ ಫೆನ್ಸಿಂಗ್ನಲ್ಲಿ ಹೋಶೀಯಾರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅಲ್ಲದೇ ಕೇರಳದಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.