ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಸುಮಾರು 1.15 ಲಕ್ಷ ಕೊರೋನಾ ಸೋಂಕಿತರಿಗೆ ಕೋವಿಡ್-19 ಟೆಸ್ಟ್ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ನೀಡಲಾಗಿದೆ.
ಈ ವರೆಗೆ 28,34,798 ಜನರಿಗೆ ಕೊರೋನಾ ವೈರಸ್ನ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 1,15,364 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಪ್ರಸ್ತುತ ದೇಶದಲ್ಲಿ 587 ಪ್ರಯೋಗಾಲಯಗಳಿದ್ದು, ಅವುಗಳಲ್ಲಿ 407 ಸರ್ಕಾರಿ ಪ್ರಯೋಗಾಲಯಗಳು ಮತ್ತು 180 ಖಾಸಗಿ ಲ್ಯಾಬ್ಗಳಿವೆ ಎಂದು ಮಂಡಳಿ ತಿಳಿಸಿದೆ. ಅವುಗಳಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಈವರೆಗೆ ಭಾರತದಲ್ಲಿ ಮಾರಕ ವೈರಸ್ನಿಂದಾಗಿ 3,720 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 51,784 ಮಂದಿ ಈ ವರೆಗೆ ಚೇತರಿಸಿಕೊಂಡಿರುವುದಾಗಿಯೂ ವರದಿಗಳು ಮಾಹಿತಿ ನೀಡಿವೆ.
44,582 ಪ್ರಕರಣಗಳು ಮಹಾರಾಷ್ಟ್ರ ದಲ್ಲಿ ದಾಖಲಾಗಿದ್ದರೆ, 14,753 ಪ್ರಕರಣಗಳು ತಮಿಳುನಾಡು ಮತ್ತು 13,268 ಪ್ರಕರಣಗಳು ಗುಜರಾತ್ ನಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.