ನವದೆಹಲಿ: ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವನ್ನು ನಡೆಸುವುದಕ್ಕೆ ಕುಖ್ಯಾತಿಯನ್ನು ಪಡೆದುಕೊಂಡಿರುವ ಪಾಕಿಸ್ಥಾನ, ಇದೀಗ ಮತ್ತೊಮ್ಮೆ ತನ್ನ ನೀಚ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದೆ. ಅಲ್ಲಿನ ಸರ್ಕಾರವೇ ಮುಂದೆ ನಿಂತು ಹಿಂದುಗಳ ನೂರಾರು ಮನೆಗಳನ್ನು ನೆಲಸಮಗೊಳಿಸಿದೆ. ಅಮಾಯಕ ಹಿಂದೂಗಳು ಬಿಸಿಲ ಬೇಗೆಯಲ್ಲಿ ನಿಂತು ದಿನದೂಡುವಂತಹ ಪರಿಸ್ಥಿತಿ ಅಲ್ಲಿ ಉದ್ಭವವಾಗಿದೆ.
ಪಂಜಾಬ್ ಪ್ರಾಂತ್ಯದ ಭವಲ್ಪುರ ಪ್ರದೇಶದಲ್ಲಿ ದೊಡ್ಡ ದೊಡ್ಡ ಬುಲ್ಡೋಜರ್ಗಳ ಮೂಲಕ ಹಿಂದೂಗಳ ಮನೆಯನ್ನು ಅಲ್ಲಿನ ವಸತಿ ಸಚಿವರ ಮುಂದೆಯೇ ನೆಲಸಮಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದ ವಸತಿ ಸಚಿವ ತಾರೀಕ್ ಬಶೀರ್ ಚೀಮಾ ಉಪಸ್ಥಿತಿಯಲ್ಲಿ ಹಿಂದೂಗಳ ಮನೆಗಳನ್ನು ಧ್ವಂಸ ಮಾಡಲಾಗಿದೆ. ಈತ ಇಮ್ರಾನ್ ಖಾನ್ ಸಂಪುಟದ ಸದಸ್ಯನೂ ಹೌದು. ಈತನಿಗೆ ಪಾಕಿಸ್ಥಾನದ ಪ್ರಧಾನ ಮಾಹಿತಿ ಅಧಿಕಾರಿ ಶಾಹೀದ್ ಖೊಕರ್ ಸಾಥ್ ನೀಡಿದ್ದಾನೆ.
Heartwrenching stories of atrocities on minorities daily, now with direct involvement of #Pakistan Govt.
On 20May2020,Tariq Bashir Cheema,Housing Minister in @ImranKhanPTI alongwith Shahid Khokhar demolished entire Hindu Basti in 59DB,Bhahwalpur!
#ColonalKiBiwi #Covid_19 @UN pic.twitter.com/0S2XzIL7dc
— Azeema (@azeema_1) May 21, 2020
ಪುರುಷರು, ಮಹಿಳೆಯರು, ಮಕ್ಕಳು ಮತ್ತು ಹಿರಿಯರು ತಮ್ಮ ಮನೆ ದ್ವಂಸವಾಗುವುದನ್ನು ಕಣ್ಣಾರೆ ಕಂಡು ನೋವಿನಲ್ಲಿ ಕೂಗಾಡಿದ್ದಾರೆ. ಮನೆ ಧ್ವಂಸ ಮಾಡದಂತೆ ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೆ ಅವರ ಪಾಲಿಗೆ ರಕ್ಷಕರೇ ಭಕ್ಷಕರಾಗಿ ಜೀವನವನ್ನು ಕಿತ್ತುಕೊಂಡಿದ್ದಾರೆ.
ಈ ಘಟನೆಯನ್ನು ಪಾಕಿಸ್ಥಾನದ ಮಾನವ ಹಕ್ಕುಗಳ ಸಂಘಟನೆ ತೀವ್ರವಾಗಿ ಖಂಡಿಸಿದೆ. ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್ ಈ ಇನ್ಸಾಫ್ ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.