ವಾಷಿಂಗ್ಟನ್: ಅಮೇರಿಕಾ ಷೇರು ವಿನಿಮಯದಲ್ಲಿ ಚೀನಾಗೆ ಸಂಬಂಧಿಸಿದ ಕೆಲವು ಸಂಸ್ಥೆಗಳು ಷೇರು ಮಾರಾಟ ಮಾಡದಂತೆ ತಡೆಯಲು ಮಸೂದೆಯೊಂದನ್ನು ಯುಎಸ್ ಸೆನೆಟ್ ಅಂಗೀಕರಿಸಿದೆ. ಕೊರೋನಾ ವೈರಸ್ಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾದ ನಡುವೆ ವಾಗ್ವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಈ ಹೊಸ ಮಸೂದೆಯಲ್ಲಿ ತಿಳಿಸಿರುವಂತೆ, ಷೇರು ಮಾರುಕಟ್ಟೆಯನ್ನು ಮುನ್ನಡೆಸುತ್ತಿರುವ ಮೇಲ್ವಿಚಾರಣಾ ಸಂಸ್ಥೆಗಳು ಅಮೆರಿಕಾದ ಮಾನದಂಡಕ್ಕನುಗುಣವಾಗಿಯೇ ಲೆಕ್ಕ ಪರಿಶೋಧನೆ, ಹಣಕಾಸು ವ್ಯವಹಾರಗಳನ್ನು ನಡೆಸಬೇಕು. ಹಾಗೆಯೇ ವ್ಯವಹಾರ ನಡೆಸುವ ಕಂಪನಿಗಳು ವಿದೇಶೀ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತಿದೆಯೇ ಅಥವಾ ವಿದೇಶೀ ಒಡೆತನದ್ದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡುವಂತೆಯೂ ಸೂಚಿಸಲಾಗಿದೆ. ಈ ಮಸೂದೆಯ ಪ್ರಕಾರ ಷೇರು ವ್ಯವಸ್ಥೆಯಲ್ಲಿ ಅಧ್ಯಕ್ಷ ಟ್ರಂಪ್ ಅವರು ಸಹಿ ಮಾಡುವುದಕ್ಕೂ ಮುನ್ನ ಕೆಳಮನೆಯ ಪ್ರತಿನಿಧಿಗಳು ಅಂಗೀಕರಿಸುವಂತೆಯೂ ತಿಳಿಸಲಾಗಿದೆ. ಈ ಮಸೂದೆಯಲ್ಲಿ ಬಹಿರಂಗವಾಗಿ ಇದು ಚೀನಾ ಸಂಸ್ಥೆಗಳ ವಿರುದ್ಧದ ಮಸೂದೆ ಎಂದು ಬಹಿರಂಗವಾಗಿಲ್ಲವಾದರೂ, ಇದನ್ನು ಚೀನಾ ವಿರುದ್ಧವಾಗಿಯೇ ರೂಪಿಸಲಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಚೀನಾದ ಲಕಿನ್ ಕಾಫಿ ವ್ಯವಹಾರದ ವಂಚನೆಯ ಬಳಿಕ ಅಮೆರಿಕ ಇದೀಗ ಈ ಮಸೂದೆಯನ್ನು ಜಾರಿಗೊಳಿಸಿದೆ. 2019 ರಲ್ಲಿ ಚೀನಾ ಲಕಿನ್ ಕಾಫಿ ವಂಚನೆಯ ಪರಿಣಾಮ ಎಪ್ರಿಲ್ 8 ರಂದು ಅಮೆರಿಕ ಲಕಿನ್ ಜೊತೆಗಿನ ಎಲ್ಲಾ ವ್ಯವಹಾರಗಳನ್ನು ನಿಲ್ಲಿಸಿತ್ತು. ಆ ಬಳಿಕ ಲಕಿನ್ ಸಂಸ್ಥೆ ಈ ಸಂಬಂಧ ವಿಚಾರಣೆ ನಡೆಸಿ ಸಿಇಒ ಜಿಯಾನ್ ಲಿಯು ಮತ್ತು ಇನ್ನೂ ಹಲವು ನೌಕರರನ್ನು ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿ, ಅಮಾನತು ಸಹ ಮಾಡಿತ್ತು. ಜೊತೆಗೆ ಸೆಪ್ಟೆಂಬರ್ 2019 ರ ವರೆಗೆ ಹಿಂದಿನ ಹಣಕಾಸು, ಮತ್ತಿತರ ವ್ಯವಹಾರಗಳನ್ನು ಅವಲಂಬಿಸದಂತೆಯೂ ಹೂಡಿಕೆದಾರರಿಗೆ ಅದು ಸೂಚಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.