ನವದೆಹಲಿ: ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆಯ ಸಂದೇಶ ಸಾರುವ ‘ಜಯತು ಜಯತು ಭಾರತಂ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಟ್ವಿಟರ್ ಮೂಲಕ ಈ ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಆತ್ಮನಿರ್ಭರ ಭಾರತ ಎಂಬ ಪರಿಕಲ್ಪನೆಯ ವಸುದೈವ ಕುಟುಂಬಕಂ ಎಂಬ ಸುಂದರ ಈ ಸುಮಧುರ, ಅರ್ಥಪೂರ್ಣ ಗೀತೆ ಪ್ರತಿಯೊಬ್ಬ ಭಾರತೀಯನಲ್ಲಿಯೂ ಉತ್ಸಾಹ ತುಂಬಲಿದೆ ಎಂದು ಸ್ವತಃ ಮೋದಿ ಅವರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂದೇಶವನ್ನು ಈ ಹಾಡು ಸಾರುತ್ತಿದೆ ಎಂಬುದಾಗಿಯೂ ಮೋದಿ ಅವರು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಸುಮಧುರ, ಅರ್ಥಪೂರ್ಣ ಗೀತೆ ಪ್ರತಿಯೊಬ್ಬ ಭಾರತೀಯನಲ್ಲಿಯೂ ಉತ್ಸಾಹ ತುಂಬಲಿದೆ ಎಂದು ಸ್ವತಃ ಮೋದಿ ಅವರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
यह गीत हर किसी को उत्साहित और प्रेरित करने वाला है। इसमें आत्मनिर्भर भारत के लिए सुरों से सजा उद्घोष है। https://t.co/N6qy4BaCfI
— Narendra Modi (@narendramodi) May 17, 2020
ಬಾಲಿವುಡ್ನ ಖ್ಯಾತ ಗೀತರಚನೆಕಾರ ಪ್ರಸೂನ್ ಜೋಷಿ ರಚಿಸಿದ ಈ ಗೀತೆಯನ್ನು, ಸಂಗೀತ ನಿರ್ದೇಶಕ, ಗಾಯಕ ಶಂಕರ್ ಮಹದೇವನ್ ಅವರು ಸಂಯೋಜನೆ ಮಾಡಿದ್ದಾರೆ. ಸಿಂಗರ್ಸ್ ರೈಟ್ಸ್ ಅಸೋಸಿಯೇಷನ್ನ ಸದಸ್ಯರು ಈ ಗೀತೆಗೆ ಧ್ವನಿ ನೀಡಿದ್ದಾರೆ. ಈ ಗೀತೆಯನ್ನು ಪ್ರಧಾನಿ ಮೋದಿ ಅವರಿಗೆ ಅರ್ಪಿಸಿರುವುದಾಗಿ ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್ ತಿಳಿಸಿದ್ದಾರೆ.
ಇದರ ಇನ್ನೊಂದು ವಿಶೇಷತೆ ಏನೆಂದರೆ 12 ಭಾರತೀಯ ಭಾಷೆಗಳಲ್ಲಿ, ಸುಮಾರು 211 ಗಾಯಕರು ಈ ಗೀತೆಗೆ ಧ್ವನಿಯಾಗುವ ಮೂಲಕ ಸ್ವಾವಲಂಬಿ ರಾಷ್ಟ್ರದ ಪರಿಕಲ್ಪನೆಗೆ ಜೀವ ನೀಡಿದ್ದಾರೆ. ಇನ್ನು ಆಶಾ ಭೋಂಸ್ಲೆ ಅವರ ಧ್ವನಿಯಿಂದ ಆರಂಭವಾಗುವ ಈ ಗೀತೆ ಎಸ್ ಪಿ ಬಿ, ಸೋನು ನಿಗಮ್, ಅನುರಾಧಾ ಪೊದ್ವಾಲ್, ಕವಿತಾ ಕೃಷ್ಣಮೂರ್ತಿ, ಶಾನ್, ಉದಿತ್ ನಾರಾಯಣ್ ಮೊದಲಾದವರ ಭಾರತೀಯ ಪ್ರಖ್ಯಾತ ಗಾಯಕರ ಧ್ವನಿಯಲ್ಲಿ ಮುಂದುವರಿಯುತ್ತದೆ. ದೇಶದ ಎಲ್ಲಾ ಭಾಷೆಗಳ ಗಾಯಕರೂ ಇದರಲ್ಲಿ ಭಾಗವಹಿಸಿದ್ದು ಕನ್ನಡದಿಂದ ವಿಜಯ ಪ್ರಕಾಶ್, ಸಂಗೀತಾ ಕಟ್ಟಿ, ಬಿ. ಕೆ. ಸುಮಿತ್ರಾ, ಶಮಿತಾ ಮಲ್ನಾಡ್, ಅಜಯ್ ವಾರಿಯರ್, ಮಂಜುಳಾ ಗುರುರಾಜ್, ಬಿ ಆರ್ ಛಾಯಾ, ಕಸ್ತೂರಿ ಶಂಕರ್ ಅವರು ಧ್ವನಿ ನೀಡಿದ್ದಾರೆ.
विश्व प्रेम की ओढ़ चदरिया, सच्चे स्वर में गाता है,
एक सुरीली आशा लेकर सूरज नए उगाता है,
जयतु-जयतु भारतम्…
211 singers come together to dedicate this song of hope to the 1.3 billion Indians to get ready for a post Corona world. pic.twitter.com/UbsTI5Llpj
— BJP (@BJP4India) May 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.