ನವದೆಹಲಿ: ಕೊರೋನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಕೈ ಜೋಡಿಸುವ ಸಲುವಾಗಿ ಪಿಎಂ ಕೇರ್ಸ್ ಫಂಡ್ಗೆ 25 ಲಕ್ಷ ರೂ ದೇಣಿಗೆನ್ನು BPPI (ಬ್ಯೂರೋ ಆಫ್ ಫಾರ್ಮಾ ಪಿ ಎಸ್ ಯು ಆಫ್ ಇಂಡಿಯಾ) ಫಾರ್ಮಾಸ್ಯುಟಿಕಲ್ಸ್ ಇಲಾಖೆಯಡಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಮೂಲಕ ಈ ಮೊತ್ತವನ್ನು ದೇಣಿಗೆ ನೀಡಿದೆ.
ಈ ದೇಣಿಗೆಯ ಮೊತ್ತವನ್ನು ಬಿಪಿಪಿಐ ನ ಕಾರ್ಯದರ್ಶಿ ಪಿ ಡಿ ವಘೇಲಾ ಅವರು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರಿಗೆ ನವದೆಹಲಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಪಿಪಿಐ ಸಿಇಒ ಶ್ರೀ ಸಚಿನ್ ಸಿಂಗ್, ಶ್ರೀ ರಜನೀಶ್ ಟಿಂಗಲ್, ಜೆಎಸ್, ಫಾರ್ಮಾ, ಶ್ರೀ ನವದೀಪ್ ರಿನ್ವಾ, ಜೆಎಸ್, ಫಾರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ದೇಣಿಗೆಯನ್ನು ಬಿಪಿಪಿಐ ನ ನೌಕರರು, ಅಧಿಕಾರಿಗಳು, ಜನೌಷಧ ಕೇಂದ್ರಗಳ ವಿತರಕರುಗಳ ಸಹಯೋಗದೊಂದಿಗೆ ನೀಡಲಾಗಿದೆ. ಪ್ರಧಾನ ಮಂತ್ರಿ ಜನೌಷದ ಕೇಂದ್ರದಲ್ಲಿಯೂ ಕೊರೋನಾ ವಿರುದ್ಧ ಹೋರಾಟಕ್ಕೆ ಬೇಕಾದ ಅಗತ್ಯ ಸೇವೆಗಳನ್ನು ನೀಡುವಲ್ಲಿಯೂ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಇಃತಹ ಸಂದರ್ಭದಲ್ಲಿ ಭಾರತೀಯ ಜನೌಷಧ ಕೇಂದ್ರ ಹೆಚ್ಚು ಕ್ರಿಯಾತ್ಮಕವಾಗಿ ಮತ್ತು ಹೆಚ್ಚು ಬದ್ಧವಾಗಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ಕೊರೋನಾ ವಿರುದ್ಧ ಸಮರ್ಥ ಹೋರಾಟ ನಡೆಸುತ್ತಿದೆ.
ಅಲ್ಲದೆ ಜನೌಷಧ ಕೇಂದ್ರಗಳಲ್ಲಿ ಲಾಕ್ಡೌನ್ ಸಂದರ್ಭದಲ್ಲಿಯೂ ಅಗತ್ಯ ಔಷಧಗಳ ಲಭ್ಯತೆಯ ಕುರಿತಾಗಿಯೂ ಬಿಪಿಪಿಐ ನಿಗಾ ವಹಿಸಿದೆ. ಆ ಮೂಲಕ ಎಪ್ರಿಲ್ ನಲ್ಲಿ 52 ಕೋಟಿ ರೂ. ಮತ್ತು ಮಾರ್ಚ್ ನಲ್ಲಿ 42 ಕೋಟಿ ರೂ. ವಹಿವಾಟುಗಳನ್ನು ಫೇಸ್ ಮಾಸ್ಕ್, ಹೈಡ್ರಾಕ್ಸಿಕ್ಲೋರೋಕ್ವಿನ್, ಅಜಿತ್ರೋಮೈಸಿನ್ ಮತ್ತು ಪ್ಯಾರಾಸಿಟಮೋಲ್ ವ್ಯಾಪಾರದ ಮುಖಾಃತರವೇ ನಡೆಸಿದೆ. ಅಲ್ಲದೆ ಮಾರುಕಟ್ಟೆಯನ್ನು ಅವಲಂಬಿಸಿದಂತೆ ಮುಂದಿನ 6 ತಿಂಗಳಿಗೆ ಬೇಕಾದ ಔಷಧಗಳನ್ನು ಖರೀದಿಸುವುದಕ್ಕೂ ಬಿಪಿಪಿಐ ಆದೇಶ ನೀಡಿದೆ.
ಲಾಕ್ಡೌನ್ ಸಂದರ್ಭದಲ್ಲಿಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ದೇಶದೆಲ್ಲೆಡೆ 6300 ಕ್ಕೂ ಅಧಿಕ ಜನೌಷಧ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ‘ಸ್ವಸ್ತ್ ಕೆ ಸಿಪಾಯಿ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ವೃದ್ಧರು ಹಾಗೂ ರೋಗಿಗಳಿಗೆ ಔಷಧಗಳನ್ನು ಮನೆಗೇ ತಲುಪಿಸುವ ವ್ಯವಸ್ಥೆಯನ್ನೂ ಮಾಡಿದ್ದು, ಆ ಮೂಲಕ ಜನಸ್ನೇಹಿ ಜನೌಷಧ ಕೇಂದ್ರ ಎಂಬ ಹೆಗ್ಗಳಿಕೆಯನ್ನೂ ಗಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.