ನವದೆಹಲಿ: ದೇಶ ಕಂಡ ಮಹಾನ್ ಸಮಾಜ ಸುಧಾರಕ, ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಾರ್ಪಣೆ ಮಾಡಿದ್ದಾರೆ.
ಗೋಪಾಲಕೃಷ್ಣ ಗೋಖಲೆಯವರು 1866ರ ಮೇ 9ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಇವರು ಜನಿಸಿದರು. 1915ರ ಫೆಬ್ರವರಿ 19ರಂದು ಪುಣೆಯಲ್ಲಿ ಇವರು ನಿಧನರಾದರು.
ಇಂದು ಗೋಪಾಲಕೃಷ್ಣ ಗೋಖಲೆ ಅವರ ಜನ್ಮ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿ ಟ್ವೀಟ್ ಮಾಡಿರುವ ಮೋದಿ, “ಗೋಪಾಲ ಕೃಷ್ಣ ಗೋಖಲೆಯವರ ಜಯಂತಿಯ ಸ್ಮರಣೆಗಳು. ಅಪಾರ ಜ್ಞಾನದ ಆಶೀರ್ವಾದ ಪಡೆದುಕೊಂಡ ಮಹಾನ್ ವ್ಯಕ್ತಿತ್ವ, ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಅವರು ಅಸಾಧಾರಣ ನಾಯಕತ್ವವನ್ನು ನೀಡಿದ್ದಾರೆ” ಎಂದಿದ್ದಾರೆ.
ಗೋಪಾಲಕೃಷ್ಣ ಗೋಖಲೆ ಅವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸಂಸ್ಥಾಪಕರೂ ಆಗಿದ್ದಾರೆ.
Remembering Gopal Krishna Gokhale on his birth anniversary. A remarkable personality blessed with immense wisdom, he made outstanding contributions towards education and social empowerment. He also provided exemplary leadership to India’s freedom movement.
— Narendra Modi (@narendramodi) May 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.