ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ರೈತರ ಆತ್ಮಹತ್ಯಾ ಸರಣಿಗಳು ನಡೆಯುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ(ಎನ್ಸಿಆರ್ಬಿ) ಇದೇ ಮೊದಲ ಬಾರಿಗೆ ರೈತರ ಆತ್ಮಹತ್ಯೆಗಳ ಬಗ್ಗೆ ವಿಸ್ತೃತ ಮಾಹಿತಿಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡಿದೆ.
2014ರಲ್ಲಿ ಒಟ್ಟು 5,650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು ದೇಶದಲ್ಲಿ ನಡೆಯುತ್ತಿರುವ ಒಟ್ಟು ಆತ್ಮಹತ್ಯೆಯ ಶೇ.4.3ರಷ್ಟಾಗಿದೆ. ದಿವಾಳಿತನ, ಸಾಲಭಾದೆ ಮತ್ತು ಕುಟುಂಬ ಸಮಸ್ಯೆಗಳು ಶೇ.20.1ರಷ್ಟು ರೈತರ ಆತ್ಮಹತ್ಯೆಗೆ ಮೂಲ ಕಾರಣ, ಉಳಿದಂತೆ ಬೆಳೆನಷ್ಟವಾಗಿದೆ ಎಂದು ಶೇ.16.8ರಷ್ಟು, ಆರೋಗ್ಯ ಸಮಸ್ಯೆಯಿಂದ ಶೇ.13.2ರಷ್ಟು ಮತ್ತು ಮಾದಕ ವ್ಯಸನ ಮತ್ತು ಕುಡಿತದ ಚಟದಿಂದಾಗಿ ಶೇ.4.9ರಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ರಾಜ್ಯಗಳನ್ನು ನೋಡಿದರೆ 2014ರಲ್ಲಿ ಮಹಾರಾಷ್ಟ್ರದಲ್ಲಿ 2,568 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ತೆಲಂಗಾಣದಲ್ಲಿ 898, ಮದ್ಯಪ್ರದೇಶದಲ್ಲಿ 826 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಛತ್ತೀಸ್ಗಢದಲ್ಲಿ 443, ಕರ್ನಾಟಕದಲ್ಲಿ 321 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
2004-14ರ ಸಾಲಿನಲ್ಲಿ ಶೇ.15.8ರಷ್ಟು ರೈತರ ಆತ್ಮಹತ್ಯಾ ಪ್ರಮಾಣ ಹೆಚ್ಚಾಗಿದೆ ಎಂದು ಎನ್ಸಿಆರ್ಬಿ ಬಿಡುಗಡೆ ಮಾಡಿದ ವರದಿಯಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.