ನವದೆಹಲಿ: ಭಾರತೀಯ ನೌಕಾಪಡೆಯು ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್ (ಪಿಪಿಇ) ಸಾಮೂಹಿಕ ಉತ್ಪಾದನೆಗೆ ಮತ್ತು ಕೊರೋನಾವೈರಸ್ ಕೋವಿಡ್ -19 ಸಂದರ್ಭಗಳಲ್ಲಿ ಕ್ಲಿನಿಕಲ್ ಬಳಕೆಗೆ ಅನುಮೋದನೆಯನ್ನು ಪಡೆದುಕೊಂಡಿದೆ.
ಪಿಪಿಇ ಪರೀಕ್ಷೆ ಮತ್ತು ಪ್ರಮಾಣೀಕರಣದ ಜವಾಬ್ದಾರಿಯನ್ನು ಹೊಂದಿರುವ ಡಿಆರ್ಡಿಒ ಅಂಗಸಂಸ್ಥೆಯಾದ ಐಎನ್ಎಂಎಎಸ್ (ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್) ವತಿಯಿಂದ ಇದನ್ನು ಪರೀಕ್ಷಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪಿಪಿಇ 6/6 synthetic blood penetration resistance test pressure ಅನ್ನು ಯಶಸ್ವಿಯಾಗಿ ಜಯಸಿದೆ. (ಐಎಸ್ಒ 16603 ಮಾನದಂಡದ ಪ್ರಕಾರ ಕೇಂದ್ರವು ಕನಿಷ್ಟ 3/6 ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟವನ್ನು ಕಡ್ಡಾಯಗೊಳಿಸಿದೆ). ಹೀಗಾಗಿ ನೌಕಾಸೇನೆಯ ಪಿಪಿಇಯನ್ನು ಸಾಮೂಹಿಕ ಉತ್ಪಾದನೆ ಮತ್ತು ಕ್ಲಿನಿಕಲ್ ಬಳಕೆಗೆ ಪ್ರಮಾಣೀಕರಿಸಲಾಗಿದೆ.
#IndianNavy’s Personal Protective Equipment (PPE) clears certification by INMAS (Institute of Nuclear Medicine and Allied Sciences).
Can now be mass produced & used in clinical #Covid_19 situations#IndiaFightsCorona#MoDAgainstCorona#हरकामदेशकेनामhttps://t.co/SmAbMZXFtS pic.twitter.com/53qZ8McFib— SpokespersonNavy (@indiannavy) May 8, 2020
ಈ ಪಿಪಿಇಯ ಅತ್ಯುತ್ತಮ ಲಕ್ಷಣಗಳೆಂದರೆ ಅದರ ಸರಳ, ನವೀನ ಮತ್ತು ವೆಚ್ಚ-ಪರಿಣಾಮಕಾರಿ ವಿನ್ಯಾಸ. ಇದರಿಂದ ಇದನ್ನು ಮೂಲ ನಿಲುವಂಗಿ ಉತ್ಪಾದನಾ ಸೌಲಭ್ಯಗಳಿಂದ ಮಾಡಬಹುದು. ಬಳಸಿದ ಬಟ್ಟೆಯ ನವೀನ ಆಯ್ಕೆಗೆ ಪಿಪಿಇ ಗಮನ ಸೆಳೆಯುತ್ತದೆ. ಇದು ಪಿಪಿಇಗೆ ಅದರ ‘ಉಸಿರಾಡುವಿಕೆ’ ಮತ್ತು ಸೋಂಕು ನುಗ್ಗುವ ಪ್ರತಿರೋಧವನ್ನು ನೀಡುತ್ತದೆ ಮತ್ತು ಇದು ಬಳಕೆದಾರರಿಗೆ ಆರಾಮದಾಯಕ ಮತ್ತು ಸುರಕ್ಷಿತವಾಗಿದೆ. ಈ ಪಿಪಿಇ ವೆಚ್ಚವು ವಾಣಿಜ್ಯಿಕವಾಗಿ ಲಭ್ಯವಿರುವ ದರಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ಪ್ರಸ್ತುತದ COVID-19 ಸಾಂಕ್ರಾಮಿಕ ಸಮಯದಲ್ಲಿ ಪಿಪಿಇ ಕೊರತೆಯು ಗಂಭೀರ ಸಮಸ್ಯೆ ಆಗಿದೆ, ಏಕೆಂದರೆ ಇದು ಆರೋಗ್ಯ ಸೇವಾ ಕಾರ್ಯಕರ್ತರ ಸುರಕ್ಷತೆ ಮತ್ತು ಸ್ಥೈರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರ ಹೊರತಾಗಿ, ಆರೋಗ್ಯ ಕಾರ್ಯಪಡೆಯ ಯೋಗಕ್ಷೇಮ ಮತ್ತು ಲಭ್ಯತೆಯನ್ನು ಕುಂಠಿತಗೊಳಿಸುತ್ತದೆ.
ಪರೀಕ್ಷೆಯಲ್ಲಿ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸುವುದು ಪಿಪಿಇಗಳಿಗೆ ಅಗತ್ಯ ಮತ್ತು ಅದರ ಮಾನದಂಡಗಳನ್ನು ICMR ಮತ್ತು MoHFW ರೂಪಿಸುತ್ತದೆ.
COVID-19 ವಿರುದ್ಧದ ಹೋರಾಟದಲ್ಲಿ ಈ ನಿರ್ಣಾಯಕ ಸಂಪನ್ಮೂಲವನ್ನು ಲಭ್ಯಗೊಳಿಸುವ ಸವಾಲಿನ ಕಾರ್ಯಕ್ಕೆ ಭಾರತೀಯ ನೌಕಾಪಡೆ ಕೈಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಇನ್ನೋವೇಶನ್ ಸೆಲ್, ಇನ್ಸ್ಟಿಟ್ಯೂಟ್ ಆಫ್ ನೇವಲ್ ಮೆಡಿಸಿನ್, ಮುಂಬೈ ಮತ್ತು ನೇವಲ್ ಡಾಕ್ ಯಾರ್ಡ್ ಮುಂಬೈ ರಚಿಸಿದ ತಂಡವು ಒಟ್ಟು ಸೇರಿ ಪಿಪಿಇ ವಿನ್ಯಾಸ ಮತ್ತು ಉತ್ಪಾದನೆ ಮಾಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.