ನವದೆಹಲಿ: ಕೋವಿಡ್-19 ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ದೇಶದ ಆದಾಯ ಕುಂಠಿತವಾಗಿದ್ದು ಈ ಹಿಂದೆ ಈ ವರ್ಷದ ಜಿಎಸ್ಟಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ದಿನಾಂಕವನ್ನು ಮುಂದೂಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಆದೇಶ ಹೊರಡಿಸಿದ್ದಾರೆ. ಜೂನ್ 30 ರಂದು ಜಿಎಸ್ಟಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು ಸೂಚಿಸಿದ್ದ ಕೇಂದ್ರ ಸರ್ಕಾರ ಇದೀಗ ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿರುವುದಾಗಿ ಮಾಹಿತಿ ನೀಡಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, 5 ಕೋಟಿ ರೂ. ಗಳಿಗಿಂತ ಕಡಿಮೆ ವಹಿವಾಟು ನಡೆಸಿರುವ ಕಂಪನಿಗಳು ದಂಡ ಅಥವಾ ಬಡ್ಡಿ ತೆರಬೇಕಾಗಿಲ್ಲ. ಬೃಹತ್ ಕಂಪನಿಗಳು ತಡವಾಗಿ ಶುಲ್ಕ ಪಾವತಿಸಿದಲ್ಲಿ ದಂಡ ತೆರಬೇಕಿಲ್ಲ. ಕೇವಲ 9% ಬಡ್ಡಿ ದರವನ್ನು ಪಾವತಿಸಬೇಕು ಎಂದು ಸಚಿವೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ನೊಟೀಸ್, ಅಧಿಸೂಚನೆ, ಮಂಜೂರಾತಿ ಆದೇಶ, ಅನುಮೋದನೆ ಆದೇಶ, ರಿಟರ್ನ್ಸ್, ಮೇಲ್ಮನವಿ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಜಿಎಸ್ಟಿ ಕಾನೂನಿನ ಅನ್ವಯ ಜೂನ್ 30 ರ ವರೆಗೆ ಕಾಲಮಿತಿ ನೀಡಲಾಗಿರುವುದಾಗಿಯೂ ಕೇಂದ್ರ ವಿತ್ತ ಸಚಿವೆ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.