ಮುಂಬಯಿ: ಕೋವಿಡ್-19 ಲಾಕ್ಡೌನ್ ಮುಂಬೈನಲ್ಲಿ ನೆನಗುದಿಗೆ ಬಿದ್ದಿದ್ದ ಎಲ್ಲಾ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗಿದೆ. ಬಾಂದ್ರಾ-ಮಹೀಮ್ ವಿಭಾಗದಲ್ಲಿ ಚರ್ಚ್ಗೇಟ್ ಫಾಸ್ಟ್ ಲೈನ್ ಸೇತುವೆಯ ರಿ-ಗಿರ್ಡಿಂಗ್ ಕಾಮಗಾರಿ ಕೇವಲ ಹದಿನಾಲ್ಕು ಗಂಟೆಗಳಲ್ಲಿ ಪೂರ್ಣಗೊಂಡಿದೆ. ಕಳೆದ ಮೂರು ವರ್ಷಗಳಿಂದ ಇದು ನೆನೆಗುದಿಗೆ ಬಿದ್ದಿತ್ತು.
ರಿ-ಗಿರ್ಡಿಂಗ್ ನಡೆಸಲು ಕನಿಷ್ಠ 250 ಸ್ಥಳೀಯ ರೈಲು ಸೇವೆಗಳನ್ನು ರದ್ದುಗೊಳಿಸುವ ಅಗತ್ಯವಿರುತ್ತು. ಹೀಗಾಗಿ ಇದರ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಲಾಕ್ಡೌನ್ ಆದ ಕಾರಣ ಎಲ್ಲ ರೈಲು ಸೇವೆಗಳು ಸ್ಥಗಿತಗೊಂಡಿದೆ. ಹೀಗಾಗಿ ಏಪ್ರಿಲ್ 30 ರಂದು 14 ಗಂಟೆಗಳಲ್ಲಿ ಈ ಕಾರ್ಯ ಪೂರ್ಣಗೊಂಡಿತು.
9.15 ಮೀಟರ್ ವ್ಯಾಪಿಸಿರುವ ಮತ್ತು 5.8 ಮೀಟರ್ ಉದ್ದದ ಏಳು ಕ್ರಾಸ್-ಗಿರ್ಡರ್ಸ್ಗಳನ್ನು ಹೊಂದಿರುವ ಉಕ್ಕಿನ ಸೇತುವೆ ಮಿಥಿ ನದಿಯ ಮೇಲೆ ಇದೆ. ಉಕ್ಕಿನ ಗಿರ್ಡರ್ಗಳು ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ತಕ್ಷಣ ಅವುಗಳನ್ನು ಬದಲಾಯಿಸಬೇಕಾಗಿತ್ತು.
ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ರವೀಂದರ್ ಭಾಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಮುಂಬೈ ಉಪನಗರವು ವಿಶ್ವದ ಅತ್ಯಂತ ಜನನಿಬಿಡ ರೈಲು ಜಾಲಗಳಲ್ಲಿ ಒಂದಾಗಿದೆ ಮತ್ತು ಅಂತಹ ಪ್ರಮಾಣದ ಕೆಲಸವನ್ನು ಕೈಗೊಳ್ಳುವುದು ಕಠಿಣ ಕಾರ್ಯವಾಗಿತ್ತು. ಈ ಕೆಲಸಕ್ಕೆ ಸಂಪೂರ್ಣ ಸಂಚಾರ ಸ್ಥಗಿತಗೊಳಿಸುವ ಅಗತ್ಯವಿತ್ತು. ಆದರೆ ಇದೀಗ ಲಾಕ್ ಡೌನ್ ಅನ್ನು ಈ ಕಾರ್ಯಕ್ಕೆ ಬಳಸಿಕೊಂಡೆವು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.