ಬೆಂಗಳೂರು: ಕಷ್ಟ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಇತರರ ಕಷ್ಟಕ್ಕೆ ನೆಲವಾಗುವ ಮನಸ್ಸು ಮಾತ್ರ ಎಲ್ಲರಲ್ಲಿಯೂ ಮೂಡುವುದಿಲ್ಲ. ಕೆಲವು ಜನರು ತಮ್ಮಲ್ಲಿ ಎಷ್ಟು ಸಂಪತ್ತಿದ್ದರೂ ದಾನ ಧರ್ಮದ ವಿಚಾರದಲ್ಲಿ ಮಾತ್ರ ಹಿಂದೆ. ಆದರೆ ಇನ್ನೂ ಕೆಲವರಿದ್ದಾರೆ. ಅವರೇ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಕಷ್ಟಪಡುತ್ತಿದ್ದರೂ, ಇತರರ ಸಂಕಟಕ್ಕೆ ಮರುಗುವವರು. ತಮ್ಮಲ್ಲಿ ಇದ್ದದ್ದರಲ್ಲಿಯೇ ಇತರರಿಗೂ ಸಹಾಯ ಮಾಡುವವರು. ಸೇವೆಗೆ ಮನಸ್ಸು ಮುಖ್ಯ ಎಂಬುದನ್ನು ಜಗತ್ತಿಗೆ ಸಾರುವವರು. ಅಂತಹ ಓರ್ವ ತರಕಾರಿ ವ್ಯಾಪಾರಿ ಮಹಿಳೆಯ ಬಗ್ಗೆ ತಮಗಾದ ಅನುಭವವನ್ನು ಬರೆದಿದ್ದಾರೆ ವಕೀಲೆ ಕ್ಷಮಾ ನರ್ಗುಂದ್ ಅವರು.
ಅಂದ ಹಾಗೆ ಅವರ ಹೆಸರು ಮಮತಾ. ಬೆಂಗಳೂರಿನ ರಾಜಾಜಿನಗರದ ರಾಮ ಮಂದಿರ ಸಮೀಪ ತರಕಾರಿ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡವರು. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಕ್ಷಮಾ ಅವರು ಒಂದು ಬಾರಿ ಇವರಿಂದ ತರಕಾರಿ ಖರೀದಿಸುತ್ತಿರಬೇಕಾದರೆ, ಅದೆಲ್ಲಿಂದಲೋ ಬಂದ ಓರ್ವ ವ್ಯಕ್ತಿ ಅವರಿಂದ ದೊಡ್ಡ ಕಟ್ಟು ಕರಿಬೇವಿನ ಎಲೆಗಳನ್ನು ಕೊಳ್ಳುತ್ತಾನೆ. ಇಷ್ಟು ಪ್ರಮಾಣದಲ್ಲಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಏನು.ಮಾಡುತ್ತೀರಿ ಎಂದು ಆತನನ್ನು ಪ್ರಶ್ನಿಸಿದ ಮಮತಾ ಅವರಿಗೆ ಆತನ ಉತ್ತರ ಹೀಗಿತ್ತು.
ಸಮೀಪದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಉಚಿತ ಆಹಾರ ತಯಾರು ಮಾಡಿ ನೀಡಲಾಗುತ್ತಿದ್ದು, ಅದಕ್ಕೆ ಈ ಸೊಪ್ಪು ಕೊಂಡುಕೊಳ್ಳುತ್ತಿರುವುದಾಗಿ ತಿಳಿಸುತ್ತಾನೆ. ಈ ಕುರಿತಂತೆ ಅವನನ್ನು ಮತ್ತಷ್ಟು ಪ್ರಶ್ನಿಸಿದ ಮಮತಾಗೆ ಆತನ ಮಾತು ಸತ್ಯವೆಂದು ಅರಿವಿಗೆ ಬರುತ್ತದೆ. ಆಕೆ ಅವನಿಗೆ ಬೇಕಾದ ಎಲ್ಲಾ ತರಕಾರಿಗಳನ್ನು ಉಚಿತವಾಗಿ ನೀಡುತ್ತಾರೆ. ಅಲ್ಲದೆ ಮುಂದಿನ ದಿನಗಳಲ್ಲಿಯೂ ತರಕಾರಿಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗುವಂತೆಯೂ ಆತನಲ್ಲಿ ಮನವಿ ಮಾಡುವ ಮೂಲಕ ತಮ್ಮ ಅಳಿಲು ಸೇವೆಯನ್ನು ಮಾಡುತ್ತಾರೆ.
ಇನ್ನು ಈ ವರೆಗೆ ಮಮತಾರಿಂದ ಅದೆಷ್ಟೋ ನಿರ್ಮಾಣ ಕಾರ್ಮಿಕರು ಉಚಿತವಾಗಿ ತರಕಾರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಮತಾರಲ್ಲಿ ವಿಚಾರಿಸಿದಾಗ, ಇಂತಹ ಸಂದರ್ಭದಲ್ಲಿ ನಾನು ಸಮಾಜಕ್ಕಾಗಿ ಮಾಡಬಹುದಾದಾ ಕನಿಷ್ಟ ಸೇವೆ ಇದಾಗಿದೆ ಎಂಬುದಾಗಿ ಉತ್ತರಿಸುತ್ತಾರೆ.
ಇಃತಹ ಅನೇಕ ತಾಯಂದಿರು ಯಾರ ಗಮನಕ್ಕೂ ಬಾರದಂತೆ ಸಮಾಜಕ್ಕೂ ಸ್ವಲ್ಪ ಎಂಬಂತೆ ಕಾರ್ಯ ನಿರ್ವಹಿಸುತ್ತಾರೆ. ಅಃತಹ ತಾಯಂದಿರನ್ನು ಬೆಳಕಿಗೆ ತರುವವರು ಮಾತ್ರ ಕಡಿಮೆ. ಇದ್ಧವರು ಸಹಾಯ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ತಮ್ಮ ಹೊಟ್ಟೆ ಹೊರೆಯುವ ಸಲುವಾಗಿ ಕಷ್ಟಪಟ್ಟು ದುಡಿಯುವ ಮಮತಾರಂತಹ ಜನರು ನೀಡುವುದಿದೆಯಲ್ಲಾ ಅದು ನಿಜಕ್ಕೂ ಗ್ರೇಟ್.
ಈ ಕುರಿತು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಮಮತಾ ಅವರನ್ನು ಭೇಟಿಯಾಗಿ, ಅವರ ಈ ಸಮಾಜ ಕಾರ್ಯವನ್ನು ಶ್ಲಾಘಿಸಿದರು.
Minister and Rajajinagar MLA @nimmasuresh visits Mamtha’s shop on Monday evening after her post went viral . He went there to appreciate her deed https://t.co/9VqhD1eoiq pic.twitter.com/IhsFIAmKin
— Ashwini M Sripad (@AshwiniMS_TNIE) April 21, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.