ರಾಂಚಿ: ತಮ್ಮ ಮೃತ ಮಗಳಿಗೆ ನ್ಯಾಯ ದೊರಕಿಸಿ ಕೊಡಲಾಗಲಿಲ್ಲ ಎಂಬ ದುಃಖದಲ್ಲಿರುವ ದಂಪತಿಗಳು ಸಾಯಲು ಅನುಮತಿ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಬಿದಿಶಾ ರಾಯ್ ಎಂಬ ರಾಂಚಿ ಮೂಲದ ಹಿ ಕ್ಯೂ ಇಂಟರ್ನ್ಯಾಷನಲ್ ಅಕಾಡಮಿ ವಿದ್ಯಾರ್ಥಿನಿ 2013ರ ಸೆಪ್ಟಂಬರ್ನಲ್ಲಿ ಹೋಟೆಲ್ ರೂಮ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು.
ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕೆ ಹೊಂದಿದ್ದ ಆಕೆಯ ಹೆತ್ತವರಾದ ವಿಕಾಸ್ ಮತ್ತು ಜಬಾ ರಾಯ್ ಈ ಬಗ್ಗೆ ಬರಿಯತು ಪೊಲೀಸ್ ಸ್ಟೇಶನ್ನಿನಲ್ಲಿ ಶಾಲೆಯ ನಿರ್ದೇಶಕ ಸುಭಾಷ್ ಕಿರ್ಪೇಕರ್ ಮತ್ತು ಮುಖ್ಯಸ್ಥ ಹರಿಶಂಕರ್ ಚರ್ತುವೇದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಬಿದಿಶಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ, ಆದರೆ ಪೊಲೀಸರು ಆ ನಿಟ್ಟಿನಲ್ಲಿ ತನಿಖೆಯನ್ನು ಕೈಗೊಳ್ಳದೆ ಇದೀಗ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ರಾಯ್ ದಂಪತಿಗಳು ಆರೋಪಿಸಿದ್ದಾರೆ.
ಪೋಷಕರಾಗಿ ಮಗಳಿಗೆ ನ್ಯಾಯ ದೊರಕಿಸಲು ನಮಗೆ ಸಾಧ್ಯವಾಗಲಿಲ್ಲ. ಮುಂದೆ ನ್ಯಾಯ ಸಿಗುವ ವಿಶ್ವಾಸವೂ ಇಲ್ಲ. ಹೀಗಾಗೀ ಪ್ರಧಾನಿಯವರಿಗೆ ಪತ್ರವನ್ನು ಬರೆದು ನಮಗೆ ಸಾಯಲು ಅವಕಾಶ ಕೊಡುವಂತೆ ಮನವಿ ಮಾಡಿದ್ದೇವೆ ಎಂದು ಈ ದಂಪತಿಗಳು ದುಃಖದಿಂದ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.