ಮುಂಬೈ: ವೈರಾಣು ಮುಕ್ತಗೊಳಿಸುವ ಸಲುವಾಗಿ ಪುಣೆಯ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಷನ್ಸ್ ಲಿ. ಸೋಂಕು ನಿವಾರಕ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದೆ. ಕೊಳಚೆ ಪ್ರದೇಶ, ಕೈಗಾರಿಕಾ ವಲಯ, ಆಸ್ಪತ್ರೆ, ಕಾರ್ಖಾನೆ, ವಸತಿ ಪ್ರದೇಶಗಳನ್ನು ವೈರಾಣು ಮುಕ್ತ ಪ್ರದೇಶಗಳನ್ನಾಗಿ ಮಾಡಲು ಪೂರಕವಾಗಿ ಕೆಲಸ ಮಾಡುವಂತೆ ಕೈನೆಟಿಕ್ ಇ- ಫಾಗರ್, ಇ- ಸ್ಪ್ರೇಯರ್ಗಳನ್ನೊಳಗೊಂಡಂತೆ ಮೂರು ವಿಧದ ವಾಹನಗಳನ್ನು ಕೈನೆಟಿಕ್ ಸಂಸ್ಥೆ ಪರಿಚಯಿಸಿದೆ.
ಈ ವಾಹನಗಳು ಹೊರಾಂಗಣದ ಜೊತೆಗೆ ಕಛೇರಿಯಂತಹ ಒಳಾಂಗಣ ಪ್ರದೇಶದಲ್ಲಿಯೂ ಸೋಂಕು ನಿವಾರಣೆಗೆ ಸೂಕ್ತವಾದ ಪೋರ್ಟೆಬಲ್ ಯುವಿ ಸ್ಯಾನಿಟೈಸರ್ಗಳನ್ನು ಸಾಗಿಸಬಲ್ಲದು. ಜೊತೆಗೆ ವಾತಾವರಣದಲ್ಲಿರುವ ಸೋಂಕು ಹರಡುವ ವೈರಾಣುಗಳನ್ನು ಸಮರ್ಥವಾಗಿ ಎದುರಿಸಬಲ್ಲದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಸಿಇಒ ಸುಲಜ್ಜಾ ಫಿರೋದಿಯಾ ‘ಈ ವಾಹನಗಳನ್ನು ಪರಿಚಯಿಸಲು ಸಂಸ್ಥೆ ಖುಷಿ ಪಡುತ್ತದೆ. ಇದು ಹಾನಿಕಾರಕ ವೈರಸ್ ಮುಕ್ತ ಪರಿಸರ ಸೃಷ್ಟಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ವೈರಸ್ ತಡೆಗೂ ಇದು ಸಹಕಾರಿಯಾಗಿದೆ. ಈ ವಾಹನಗಳನ್ನು ಶೀಘ್ರದಲ್ಲೇ ಸರ್ಕಾರ, ಮುನ್ಸಿಪಲ್ ಕಾರ್ಪೊರೇಶನ್ಗೆ ನೀಡಲು ಬಯಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಈ ವಾಹನಗಳ ಮೂಲಕ ಅಗತ್ಯ ಪ್ರದೇಶಗಳನ್ನು ಸೋಂಕುಮುಕ್ತಗೊಳಿಸಲು ನೆರವಾಗುವುದಾಗಿಯೂ ಅವರು ಹೇಳಿದ್ದಾರೆ.
ಕೈನೆಟಿಕ್ ಇ-ಫಾಗರ್ನೊಂದಿಗೆ, ಕಂಪನಿಯು ಥರ್ಮಲ್ ಫಾಗಿಂಗ್ ಬದಲಿಗೆ ಕೋಲ್ಡ್ ಫಾಗಿಂಗ್ ಅನ್ನು ಬಳಸುವ ವಾಟರ್-ಬಾಸ್ರ್ಡ್ ಫಾಗಿಂಗ್ ಪರಿಹಾರವನ್ನು ಅಭಿವೃದ್ಧಿಪಡಿಸಿದೆ. ಇದು ಡಿಸೇಲ್ ಬದಲಾಗಿ ನೀರನ್ನು ಬಳಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಇನ್ನು ಈ ವಾಹನಗಳು ಮೂರು ಚಕ್ರಗಳದ್ದಾಗಿದ್ದು, ಕಡಿಮೆ ಸ್ಥಳಾವಕಾಶದಲ್ಲಿಯೂ ಹೆಚ್ಚು ಪರಿಪೂರ್ಣವಾಗಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಇ-ಫಾಗರ್ ಮತ್ತು ಇ-ಸ್ಪ್ರೇಯರ್ ಕಿ.ಮೀ. ಗೆ 50 ಪೈಸೆಗಳ ನಿರ್ವಹಣಾ ವೆಚ್ಚವನ್ನು ಹೊಂದಿದೆ. ಇನ್ನು ಒಳಾಂಗಣ ಪ್ರದೇಶದಲ್ಲಿ ವೈರಸ್ ಮುಕ್ತಗೊಳಿಸಲು ಅತಿ ನೇರಳೆ ಕಿರಣಗಳನ್ನು ಬಳಸಿ ಕಾರ್ಯ ನಿರ್ವಹಿಸುವ ಯುವಿ ಸ್ಯಾನಿಟೈಸರ್ ಅನ್ನು ಬಳಕೆ ಮಾಡಬಹುದಾಗಿದೆ.
ಇ-ಫಾಗರ್ಗಳನ್ನು ಈಗಾಗಲೇ ಉತ್ತರ ಪ್ರದೇಶ, ಮಹಾರಾಷ್ಟ್ರಗಳಲ್ಲಿಯೂ ಬಳಕೆ ಮಾಡಲಾಗುತ್ತದೆ. ಇನ್ನು ಇದರ ವ್ಯಾಪ್ತಿ ಹೆಚ್ಚಿಸಲು ಕಂಪನಿಯು ಬೇರೆ ಬೇರೆ ನಗರಗಳ ಸಂಸ್ಥೆಗಳ ಜೊತೆಗೂ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.