ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ವಿರಚಿತ ಧಾರಾವಾಹಿ ರಾಮಾಯಣ ಭಾರತದಲ್ಲಿ ಅತೀ ಹೆಚ್ಚು ಟಿಆರ್ಪಿ ಪಡೆದ ಬೆನ್ನಲ್ಲೇ ಇದೀಗ ಮತ್ತೊಂದು ಸಾಧನೆ ಮಾಡಿದೆ. ವಿಶ್ವ ಮಟ್ಟದಲ್ಲಿಯೂ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದೆ ಎಂದು ಪ್ರಸಾರ ಭಾರತಿ ವರದಿ ಮಾಡಿದೆ. ಆ ಮೂಲಕ ಕೆಲ ದಶಕಗಳ ಹಿಂದಿನ ಧಾರಾವಾಹಿ ಮತ್ತೆ ಮರುಪ್ರಸಾರ ಕಂಡು ವಿಶ್ವದೆಲ್ಲೆಡೆ ಪ್ರಚಾರ ಪಡೆದಿದೆ.
ಎಪ್ರಿಲ್ 16 ರಂದು ರಾತ್ರಿ 9 ಗಂಟೆಗೆ ಪ್ರಸಾರಗೊಂಡ ರಾಮಾಯಣವನ್ನು ವಿಶ್ವದಾದ್ಯಂತ 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಆ ಮೂಲಕ ಬಹು ಸಂಖ್ಯೆಯಲ್ಲಿ ಹೆಚ್ಚಿನ ವೀಕ್ಷಕರನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿರುವುದಾಗಿ ಡಿಡಿ ತಿಳಿಸಿದೆ. ಭಾರತೀಯ ಟಿವಿ ಮಾಧ್ಯಮಗಳಲ್ಲಿಯೇ ಅತೀ ಹೆಚ್ಚಿನ ಜನರಿಃದ ವೀಕ್ಷಣೆಗೊಳಪಟ್ಟ ಚಾನೆಲ್ ಆಗಿಯೂ ಡಿಡಿ ಪರಿಗಣಿತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾರ್ಕ್ 18 ರಿಂದ 24 ಎಪ್ರಿಲ್ ಒಳಗಾಗಿ ದೂರದರ್ಶನ 1.64 ಬಿಲಿಯನ್ ಜನರಿಂದ ಮೆಚ್ಚುಗೆ ಪಡೆದು ಮೊದಲನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರೆ, ಸನ್ ಟಿವಿ 1.12 ಬಿಲಿಯನ್ ವೀಕ್ಷಕರನ್ನು ಸೆಳೆದು ಎರಡನೇ ಸ್ಥಾನದಲ್ಲಿದೆ.
Ramayan World Record – Highest Viewed Entertainment Program Globally#IndiaFightsCorona#IndiaFightsBack pic.twitter.com/RdCDehgxBe
— Prasar Bharati (@prasarbharati) April 28, 2020
ಇನ್ನು ರಾಮಾಯಣ ಮರು ಪ್ರಸಾರ ಆರಂಭಿಸಿದ ಬಳಿಕ ಹಿಂದಿ ಮಾಧ್ಯಮಗಳ ಪೈಕಿ ಡಿಡಿ ಅತೀ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ ಎಂದೂ ವರದಿಗಳು ಹೇಳಿವೆ. ಧಾರಾವಾಹಿಗಳಲ್ಲಿ ರಾಮಾಯಣ ವೀಕ್ಷಕರ ಸಂಖ್ಯೆ ಅತೀ ಹೆಚ್ಚು ಎಂದು ಈ ವರದಿ ಮಾಹಿತಿ ನೀಡಿದೆ. ಮೊದಲ ದಿನದ ಮೊದಲ ಸಂಚಿಕೆ 38 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. ರಾತ್ರಿಯ ಮರು ಪ್ರಸಾರದಲ್ಲಿ ಈ ಸಂಖ್ಯೆ 45 ಮಿಲಿಯನ್ ಗೆ ಏರಿಕೆ ಕಂಡಿತ್ತು. ಮರುದಿನ ಬೆಳಗ್ಗಿನ ಪ್ರಸಾರ 40 ದಶಲಕ್ಷ ಮತ್ತು ಸಂಜೆಯ ಶೋ 51 ದಶಲಕ್ಷ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿದೆ. ಒಟ್ಟಾಗಿ ರಾಮಾಯಣವನ್ನು 91 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದಾಗಿ ಪ್ರಸಾರ ಭಾರತಿಯ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.