ನವದೆಹಲಿ: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಇಂದು ವಿಧಿವಶರಾಗಿದ್ದಾರೆ. ಮೇರು ನಟನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಮೋದಿ, “ಇರ್ಫಾನ್ ಖಾನ್ ಅವರ ಅಗಲುವಿಕೆ ಸಿನಿಮಾ ಮತ್ತು ರಂಗಭೂಮಿ ಜಗತ್ತಿಗೆ ತುಂಬಲಾರದ ನಷ್ಟ. ವಿವಿಧ ಮಾಧ್ಯಮಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯಿಂದ ಅವರು ನೆನಪಲ್ಲಿ ಉಳಿಯಲಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳೊಂದಿಗೆ ನಮ್ಮ ಪ್ರಾರ್ಥನೆ ಇದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Irrfan Khan’s demise is a loss to the world of cinema and theatre. He will be remembered for his versatile performances across different mediums. My thoughts are with his family, friends and admirers. May his soul rest in peace.
— Narendra Modi (@narendramodi) April 29, 2020
ಇರ್ಫಾನ್ ಖಾನ್ ಅವರು ಮುಂಬೈಯ ಕೋಕಿಲಬೆನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಅವರು ಕ್ಯಾನ್ಸರ್ ರೋಗದಿಂದ ಪೀಡಿತರಾಗಿದ್ದರು.
ಪ್ರಧಾನಿ ಮೋದಿ ಮಾತ್ರವಲ್ಲದೆ ವಿವಿಧ ರಾಜಕೀಯ ಗಣ್ಯರು, ಬಾಲಿವುಡ್ ನಟರು, ಕ್ರೀಡಾಪಟುಗಳು ಬಹುಮುಖ ಪ್ರತಿಭೆಯ ನಟನ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
2018ರಲ್ಲಿ ಇರ್ಫಾನ್ ಖಾನ್ ಅವರಿಗೆ ನ್ಯುರೊಯೆಂಡೊಕ್ರಿನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಇದಕ್ಕಾಗಿ ಲಂಡನ್ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. 2019ರ ಫೆಬ್ರವರಿ ತಿಂಗಳಲ್ಲಿ ಅವರು ಭಾರತಕ್ಕೆ ವಾಪಸ್ ಆಗಿ ಅಂಗ್ರೇಜಿ ಮೀಡಿಯಂ ಎಂಬ ಸಿನಿಮಾದ ಚಿತ್ರೀಕರಣ ನಡೆಸಿ ಬಳಿಕ ಮತ್ತೆ ಲಂಡನಿಗೆ ವಾಪಸ್ ಹೋಗಿದ್ದರು. 2019ರ ಸೆಪ್ಟೆಂಬರ್ನಲ್ಲಿ ಅವರು ಭಾರತಕ್ಕೆ ವಾಪಸ್ ಆಗಿದ್ದರು.
ಮೊನ್ನೆ ಶನಿವಾರವಷ್ಟೇ ಅವರ 95 ವರ್ಷದ ತಾಯಿ ನಿಧನರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.